ಎಚ್.ಎಸ್. ಶಿವಪ್ರಕಾಶ್ ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಮಳೆ ಬಿದ್ದ ನೆಲದಲ್ಲಿ, ಮಿಲರೇಪ ಸಂಕಲನಗಳಿಂದ ಗಮನ ಸೆಳೆದ ಶಿವಪ್ರಕಾಶ್ ಅವರು ನಂತರ ಅಣುಕ್ಷಣ ಚರಿತೆ, ಸೂರ್ಯಜಲ, ಮಳೆಯೇ ಮಂಟಪ ಮೊದಲಾದ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಸಮಗಾರ ಭೀಮವ್ವ’ದಂತಹ ಮಹತ್ವದ ಕವಿತೆ ರಚಿಸಿರುವ ಶಿವಪ್ರಕಾಶ್ ಅವರು ಅನುಭಾವ ಲೋಕವನ್ನು ಮುಖಾಮುಖಿಯಾಗುವ ರೀತಿ ಅನನ್ಯವಾದದ್ದು. ಶಿವಪ್ರಕಾಶ್ ಅವರ ಆಯ್ದ ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ.
ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು. ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...
READ MORE