ತೋಚಿದ್ದು ಗೀಚಿದ್ದು ಸುರೇಶ ಎಸ್ ಅವರ ಕವನ ಸಂಕಲನವಾಗಿದೆ. ಯಾರ್ ಬರ್ದ, ಯಾಕ್ ಬರ್ದ, ಯಾವಾಗ್ ಬರ್ದ, ಎಲ್ಲಿ ಬರ್ದ, ಅನ್ನೋದಕ್ಕಿಂತ ಬರೆದಿರೋದ್ರಲ್ಲಿ ಏನಾದ್ರು ಬೇಳೆಕಾಳು ಇದೆಯಾ ಅನ್ನೋದು ಮುಖ್ಯ. ಹೊಸದಾಗಿ ಬರೆಯೋದಕ್ಕೆ ಏನೂ ಇಲ್ಲ. ಋಷಿ ಮುನಿಗಳು, ಸಾಧು ಸಂತರು, ಪೀಳಿಗೆಯ ಬರಹಗಾರರು ಅವರವರ ಭಾಷೆ ಭಾವನೆಗಳಲ್ಲಿ ಮತ್ತೆ ಮತ್ತೆ ಬರೆಯುತ್ತಾರೆ. ಒಳ್ಳೆಯ ಬರವಣಿಗೆ ಎಂದರೆ ಓದುಗರನ್ನು ಹಿಡಿದಿಡುವುದು. ಇದ್ದರೆ ಈ ವಾಕ್ಯಗಳಲ್ಲಿ ಆ ಶಕ್ತಿ, ಬರೆದವನಿಗೆ ತೃಪ್ತಿ ಎಂದು ಲೇಖಕ ಸುರೇಶ ಎಸ್ ಅವರು ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಸುರೇಶ ಮೂಲತಃ ಬೆಂಗಳೂರಿನವರಾಗಿದ್ದು 25 ವರ್ಷಗಳಿಂದ ಸ್ವಂತ ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ನ್ಯೂಸ್ ಪೇಪರ್, ಟಿವಿ, ರೇಡಿಯೋ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ, ಅನೇಕ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆಕರ್ಷಕ ಜಾಹೀರಾತುಗಳನ್ನು ಸೃಷ್ಟಿಸಿದ್ದಾರೆ. ವೇದಗಳ ವಿಚಾರಗಳನ್ನು ಇಂದಿನ ಜನಾಂಗಕ್ಕೆ ಅರ್ಥವಾಗುವ ಹಾಗೆ ಪರಿಚಯಿಸಲು 'ಹೊಸಬೆಳಕು' ಎಂಬ ಅತ್ಯಂತ ಪ್ರಚಲಿತ ಧಾರಾವಾಹಿಯನ್ನು ವೇದಾಧ್ಯಾಯಿ ಸುಧಾಕರ ಶರ್ಮಾರವರೊಂದಿಗೆ ದೂರದರ್ಶನ ಚಂದನಕ್ಕಾಗಿ ಪರಿಕಲ್ಪಿಸಿ ನಿರ್ಮಿಸಿದ್ದಾರೆ. ಬರವಣಿಗೆ ಹೊಸ ಅಭ್ಯಾಸವಲ್ಲವಾದರೂ ಬರವಣಿಗೆಯನ್ನು ಪುಸ್ತಕ ಮಾಡುವ ಧೈರ್ಯ ಸಾಹಸ ಮಾಡಿದ್ದು ಇದೇ ಮೊದಲು. ಕೃತಿಗಳು: ತೋಚಿದ್ದು ಗೀಚಿದ್ದು ...
READ MORE