ಲೇಖಕ ಜೀವರಾಜ ಹ ಛತ್ರದ ಅವರ ಕವನ ಸಂಕಲನ- ರಮ್ಯಗಾನ. ಕವಿಯ ಅಂತರಂಗದ ಬೆಳಕೆ ಇಲ್ಲಿ ಕಾವ್ಯಗಳಾಗಿದೆ. ಕೃತಿಗೆ ಮುನ್ನುಡಿ ಬರೆದ ಲೇಖಕಿ ಸಂಕಮ್ಮ ಗೋ ಸಂಕಣ್ಣನವರ, ‘ಬದುಕಿನ ಏರಿಳಿತಗಳು, ಸಂತಸ ಸಂಕಟಗಳೆಲ್ಲ ಸಾರ್ವಜನಿಕ ಭಾವನೆಗಳಾಗಿ ಕಾವ್ಯಾಭಿಮುಖವಾಗಿ ಅಭಿವ್ಯಕ್ತಗೊಂಡಿದೆ. ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ, ದಲಿತ ಹೀಗೆ ಬಹುತ್ವದ ರೂಪತಾಳಿ ಬದಲಾಗುತ್ತವೆ. ಸುದೀರ್ಘ ಕನ್ನಡ ಸಾಹಿತ್ಯ ರುಚಿ, ಅಭಿರುಚಿಗಳನ್ನು , ಮಧುರ ಭಾವಗಳನ್ನು , ಸ್ಪಂದನಶೀಲ ಗುಣಗಳನ್ನು ಅರಗಿಸಿಕೊಂಡು ಮೈದುಂಬಿಕೊಂಡು ನಿಂತಿರುವ ಕೃತಿ ರಮ್ಯಗಾನ. ನವಭಾವ, ನವಜೀವ, ನವಶಕ್ತಿ ತುಂಬಿಕೊಂಡ ಭಾಷಾ ಬಳಕೆಯಲ್ಲಿ ನವ್ಯದ ಕಲಾತ್ಮಕತೆಯೊಂದಿಗಿನ ಭಾವಕ್ಕೆ ಗೀತಾತ್ಮಕ ಗುಣವಿದೆ. ಬೇಂದ್ರೆಯವರ “ಹೆಣ್ಣು ಒಡವೆಯಲ್ಲ ಅವಳೊಂದು ಒಡಲು ಎನ್ನುವ” ವಾಕ್ಯಗಳು ಇಲ್ಲಿ ವ್ಯಕ್ತವಾಗುತ್ತದೆ. ಹೆಣ್ಣಿನ ನೋವು ಸಂಕಟ ತಲ್ಲಣಗಳ ಒಳ ಅರಿವು ಹೊಂದಿದ ಕವಿಯಲ್ಲಿ ’ಅಮ್ಮನೊಡಲು ರತ್ನಗಡಲು’ ಎನ್ನುವ ವಾಕ್ಯಗಳು ಕವಿತೆಯನ್ನು ಕಾವ್ಯಾಂಶದೊಂದಿಗೆ ಗಟ್ಟಿಯಾಗುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...
READ MORE