ಬಯಲೊಳಗಿನ ಹನಿಗಳು

Author : ಬಸವರಾಜ ಕರುವಿನ

Pages 72




Year of Publication: 2021
Published by: ತನುಶ್ರೀ ಪ್ರಕಾಶನ
Address: ಸೂಲೇನಹಳ್ಳಿ, ಮೊಳಕಾಲೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ- 577535
Phone: 9741566313

Synopsys

ಕವಿ ಬಸವರಾಜ ಕರುವಿನ ಅವರ ಚೊಚ್ಚಲ ಕವನ ಸಂಕಲನ ಬಯಲೊಳಗಿನ ಹನಿಗಳು. ಕಾದಂಬರಿಕಾರ ಎಸ್. ರಾಜುಕವಿ ಸೂಲೇನಹಳ್ಳಿ ಅವರು ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

ಅವರು ಹೇಳುವಂತೆ, ಇವರ ಒಟ್ಟು 58 ಕವಿತೆಗಳಲ್ಲಿ ಎಂತಹ ಸಾರಾಂಶ ಹೊಂದಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡು ಬಂದ ಅಂಶಗಳು ಈ ಕೆಳಗಿನಂತಿವೆ. ಎಲ್ಲಾ ಕವಿತೆಗಳು ಒಳಹೊಕ್ಕು ವಿಮರ್ಶಿಸಿದಾಗ ಆದರ ಶೀರ್ಷಿಕೆಗಳು ಇಂತಿವೆ ನಾನೊಂದು ಮರ, ಅವಳೆಂದರೆ ಹಾಗೆಯೇ, ಹೆಣ್ಣು ಕೊಡುವ ಮುಂಚೆ, ಅವ್ವ, ಶಿಕ್ಷಣ, ಸ್ಮಶಾನ, ಹಸುಳೆಯ ಅಳಲು, ಆತ್ಮ ಗೌರವ, ಅಜ್ಜ, ಬಂಜೆತನದ ಅಪಹಾಸ್ಯ, ಸುಟ್ಟು ಬಿಡೋಣ, ಬಾಯಿಲ್ಲದವರು, ಸಾವಿನ ಮನೆಯಲ್ಲಿ, ಹಕ್ಕಿ ಹಾರುತಿದೆ, ಮೃಗಾಲಯವೆಂಬ ಬಂಧನ, ದನಿಯಾಗದ ಕಡಲು, ಪರಿಸರ, ಬಯಲೊಳಗಿನ ಹನಿಗಳು, ಅಕ್ಕ ಬಾರೆ ಯುಗಾದಿಗೆ, ಓ ನನ್ನ ಕಂದ, ಗುರು ಸ್ಮರಣೆ ಈ ಎಲ್ಲಾ ಕವನಗಳನ್ನು ನೋಡಿದಾಗ ಒಂದೊಂದು ಕವಿತೆಯೂ ಉತ್ತಮ ಅಂಶಗಳನ್ನು ಒಳಗೊಂಡಿದೆ. ಪ್ರತಿಯೊಂದು ಕವನ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಸಮಾಜದಲ್ಲಿ ತಮಗೆ ಕಾಣುವ ದೃಶ್ಯಗಳೇ ಕವನಗಳು ಆಗಿ ಮಾರ್ಪಟ್ಟಿದೆ ಹೆಣ್ಣು ಕೊಡುವ ಮುಂಚೆ ಕವಿತೆಯಲ್ಲಿ ಪ್ರಸ್ತುತ ದಿನಗಳಲ್ಲಿ ಸರ್ಕಾರಿ ನೌಕರರ ಆಗಿರುವ ಯುವಕರಿಗೆ ಒತ್ತು ಕೊಡುವ ಬದಲು ರೈತನ ಮಕ್ಕಳಿಗೆ ಬೆಲೆ ಕೊಡಿ ಎಂಬ ಅಂಶ ವ್ಯಕ್ತಪಡಿಸಿದ್ದಾರೆ. ಅವ್ವ ಕವಿತೆಯಲ್ಲಿ ಹೆತ್ತ ತಾಯಿ ಮೌಲ್ಯ ಅರಿಯಬಹುದು. ಶಿಕ್ಷಣ ಕವನದಲ್ಲಿ ಸಮಾಜದಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಎಷ್ಟು ಅಗತ್ಯ ಎಂಬ ಮನೋಭಾವ ಕಾಣಬಹುದು. ಸ್ಮಶಾನ ಕವನದಲ್ಲಿ ಬದಕು ಎಷ್ಟು ಬೇಗ ಅಂತ್ಯಗೊಂಡ ಪರಿ ಹೇಳಿದ್ದಾರೆ. ಹಸುಳೆಯ ಅಳಲು ಕವನದೊಳಗೆ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಲಕ್ಷಣ ಮನಗಾಣಬಹುದು. ಹೀಗೆಯೇ ಒಂದೊಂದು ಕವಿತೆ ಮತ್ತೊಂದು ಕವಿತೆಗೆ ಹೋಲಿಕೆ ಇರದೇ ಆದರದ್ದೇ ಆದ ವಿಷಯ ಪಕ್ವತೆ ಹೊಂದಿರುವ ರೀತಿ ನಿಜಕ್ಕೂ ಇಷ್ಟ ಆಗುತ್ತದೆ. ಅಜ್ಜ ಎಂಬ ಕವನದಲ್ಲಿ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮರೆಯಾಗುತ್ತಿರುವ ಮೌಲ್ಯಗಳ ಕುರಿತು ವಿವರಿಸಿದ್ದಾರೆ. ಬಂಜೆತನದ ಅಪಹಾಸ್ಯ ಕವಿತೆ ಓದಿದಾಗ ಸರಳ ಆದರೂ ಅತ್ಯಂತ ಅರ್ಥಪೂರ್ಣವಾಗಿ ವಿವರಣೆ ಮೂಡಿ ಬಂದಿದೆ. ಇನ್ನೂ ಮುಂತಾಗಿ ಬಾಯಿಲ್ಲದವರು ಕವನ ಸಮಾಜದ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮಾತು ಹೊರ ಹಾಕಿದ್ದಾರೆ. ಹಾಗೇ ಪಕ್ಷಿಗಳ ಕುರಿತು ವಿಶೇಷ ಅಭಿಮಾನ ಹೊಂದಿರಬೇಕು ಎಂಬ ಕೂಗು ಹಕ್ಕಿ ಹೇಗೆ ಬದುಕುತ್ತದೆ ಎಂಬ ಪ್ರೀತಿ ಹೇಳಿದ್ದಾರೆ. ಚಂದ್ರನ ನಿಸ್ವಾರ್ಥ ಸೇವೆ ಹೊಗಳಿದ್ದಾರೆ. ಇದಲ್ಲದೇ ಮೃಗಾಲಯವೆಂಬ ಬಂಧನ ಕವನದಲ್ಲಿ ಕರೆ ತೊರೆಗಳ ಮಹತ್ವ ಏನಿದೆ ಎಂಬ ಕೂತೂಹಲಕಾರಿ ವಿಷಯ ವ್ಯಕ್ತಪಡಿಸಿದ್ದಾರೆ.

About the Author

ಬಸವರಾಜ ಕರುವಿನ

ಕವಿ ಬಸವರಾಜ ಕರುವಿನ ಅವರು 1992 ರಲ್ಲಿ ಬಸವನಾಳು ಎಂಬ ಗ್ರಾಮದಲ್ಲಿ ನಾಗಪ್ಪ ಕರುವಿನ ಮತ್ತು ಮಂಜಮ್ಮಕೆ ಅವರ ಮಗನಾಗಿ ಜನಿಸಿದರು. ಹರಪನಹಳ್ಳಿ ತಾಲ್ಲೂಕು ವಿಜಯನಗರ ಜಿಲ್ಲೆಯವರು ಆದ ಇವರು, ತಮ್ಮ ಬಾಲ್ಯದ ಶಿಕ್ಷಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಸವನಾಳು ಎಂಬಲ್ಲಿ ಮುಗಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌರಿಪುರದಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಪ್ರೌಢಶಾಲಾ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ಹಗರಿ ಗಜಾಪುರ ಶಾಲೆಯಲ್ಲಿ ಪೂರ್ಣಗೊಳಿಸಿದರು. ಇದಾದ ಬಳಿಕ ತಮ್ಮ ಉನ್ನತ ವಿಧ್ಯಾಭ್ಯಾಸ ಪಿಯುಸಿ ಷಾ ಶೇಷಾಜಿ ಹಸ್ತಿಮಲ್ ಜೈನ್ ಪದವಿ ಪೂರ್ವ ...

READ MORE

Related Books