ಕವಿತಾ ಹಿರೇಮಠ ಅವರ ಕವನ ಸಂಕಲನ ‘ಹೃದಯವೀಣೆ’. ಕವಿಯ ಚೊಚ್ಚಲ ಕವನ ಸಂಕಲನ ಹೃದಯವೀಣೆಯನ್ನು ಓದಿದಾಗ ಇದರಲ್ಲಿ ಅಡಕವಾಗಿರುವ ಒಟ್ಟು ಎಪ್ಪತ್ತೆಂಟು ಕವನಗಳು ಕೂಡಾ ವೈವಿಧ್ಯಮಯವಾಗಿದ್ದು ಬೇರೆಬೇರೆ ವಿಷಯಗಳಿಗೆ ಸಂಬಂಧಪಟ್ಟ ರಚನೆಗಳು ಗೋಚರಿಸುತ್ತವೆ. ಬದುಕಿನಿಂದ ಹಿಡಿದು ಭಗವಂತನವರೆಗೆ ಚಿಂತಿಸುವಂತೆ ಮಾಡುವ ಕವನಗಳು ಸುಲಭವಾಗಿ ಭಾವನೆಗಳ ಅಲೆಯಲ್ಲಿ ತೇಲಿ ಕಷ್ಟ ಸುಖದ ಅರಿವನ್ನು ನಮಗೆ ನೀಡುತ್ತವೆ. ಕವಿ ಹರಿನರಸಿಂಹ ಉಪಾಧ್ಯಾಯ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದು, ‘ವೀಣೆಯ ತಂತಿಯನ್ನು ಮೀಟಿದಾಗ ಹೇಗೆ ವಿವಿಧ ನಾದ ತರಂಗಗಳು ಹೊಮ್ಮಿ ಬರುವುದೋ ಹಾಗೆಯೇ ‘ಹೃದಯವೀಣೆ’ ಕವನ ಸಂಕಲನವು ಓದುಗರಲ್ಲಿ ವಿಶೇಷ ಭಾವನೆಗಳನ್ನು ಎಬ್ಬಿಸಲಿ. ಆ ಮೂಲಕ ಇಲ್ಲಿರುವ ಕವನಗಳು ಸಮಾಜಕ್ಕೊಂದು ಸಂದೇಶವಾಗಲಿ’ ಎಂದಿದ್ದಾರೆ.
ಕವಿತಾ ಹಿರೇಮಠ ಅವರು ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಚಿಂಚರಕಿ ಎಂಬ ಗ್ರಾಮದಲ್ಲಿ. ಬಾಲ್ಯದಿಂದಲೂ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡಿದ್ದ ಇವರು, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸ್ವಂತ ಫೋಟೋ ಸ್ಟುಡಿಯೋದಲ್ಲಿ ಛಾಯಾಗ್ರಾಹಕಿಯಾಗಿದ್ನದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು 150ಕ್ಕೂ ಹೆಚ್ಚು ಗಝಲ್ ಗಳನ್ನು ಬರೆದಿದ್ದಾರೆ. ಕೃತಿ: ಹೃದಯವೀಣೆ ...
READ MORE