ಆತ್ಮೀಯ ಕವಿಮಿತ್ರರಾದ *ಬಿ. ಪಿ.ಕಟ್ಟಿಮನಿಯವರ* ಚೊಚ್ಚಲ ಕವನ ಸಂಕಲನ *ನೀನ್ಯಾರ..?* ದಿನಾಂಕ ೧೨/೦೧/೨೦೨೦ ರಂದು ರಾಯಚೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಸ್ಕಿ ತಾಲೂಕಿನಲ್ಲಿ ನಡೆದ ಕವಿವೃಕ್ಷ ಬಳಗದ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಸಾಹಿತ್ಯ ಸಾರಸ್ವತ ಲೋಕಕ್ಕೆ ಲೋಕಾರ್ಪಣೆಗೊಂಡಿತು. ಕವಿಗಳ ಕನಸಿನ ಕೂಸಾದ ಈ ಸಂಕಲನ ಅದ್ಭುತವಾಗಿ ರಚಿಸಲ್ಪಟ್ಟಿದೆ. ಮೊದಲ ಪ್ರಯತ್ನದಲ್ಲಿ ಓದುಗರನ್ನು ಹಿಡಿದಿಡುವ ಎಲ್ಲಾ ಪೂರಕ ಲಕ್ಷಣಗಳನ್ನೊಂದಿದೆ. ಬಹುತೇಕ ಕವಿತೆಗಳ ಸಾಲುಗಳಲ್ಲಿ ವಿಭಿನ್ನ ಮೋಡಿ ಮಾಡಿದಂತಿದೆ. ವಿಶಿಷ್ಟ ರಚನಾ ಶೈಲಿಯ ಸಾಲುಗಳು ಬಹುವಾಗಿ ಕಾಡುತ್ತವೆ. *ಮೋಜೆಂದರೆ ಹಣ್ಣಾಯಿತು* *ಜೂಜೆಂದರೆ ಮಣ್ಣಾಯಿತು.* ಇವು *ಚಕ್ಕಾರ* ಕವಿತೆಯ ಸಾಲುಗಳು.. ಚಕ್ಕಾರ, ಪಗಡೆಯಾಟ, ಡಾವಾಟ, ಹೀಗೆ ಹಳ್ಳಿ ಕಟ್ಟೆಯಲ್ಲಿ ಮೋಜಿಗಾಗಿ ಆರಂಭವಾಗುವ ಆಟ ಮುಂದೊಂದು ದಿನ ಜೂಜಾಟವಾಗಿ ಹೊಲ ಮನೆ ಮಾರಿಕೊಂಡು ಸಂಸಾರವನ್ನು ಬೀದಿಪಾಲು ಮಾಡಿದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಹರಿದು ಹೋಗುತ್ತವೆ. ಸಾಮಾಜಿಕ ಕಳಕಳಿಯ ಕವಿತೆ ಸಮಾಜವನ್ನು ತಿದ್ದುವ ಕಾರ್ಯಕ್ಕೆ ಇಳಿದಿದೆ. ೫೦ ಅತ್ಯುತ್ತಮ ಕವಿತೆಗಳನ್ನೊತ್ತ *ನೀನ್ಯಾರ..?* ಕವನಸಂಕಲನದ ಕವಿತೆಗಳು ಒಂದಕ್ಕಿಂತ ಒಂದರಂತೆ ಹೆಚ್ಚು ಅಮೋಘವಾಗಿ ಮೂಡಿ ಬಂದಿವೆ. ಷಟ್ಪದಿಯಲ್ಲಿ ಕವಿಯ ಹಿಡಿತವಿರುವುದೂ ಸಹ ಕೆಲವೊಂದು ಕವಿತೆಗಳಲ್ಲಿ ಸಾಕ್ಷಿಯಾಗಿದೆ. ಈ ಕವನಸಂಕಲನದಲ್ಲಿನ *ನೀನ್ಯಾರ..?* ಕವಿತೆ ಎಂತವರನ್ನೂ ಕಾಡದೇ ಬಿಡಲಾರದು. ಉತ್ತರವಿಲ್ಲದ ಪ್ರಶ್ನೆಗಳನ್ನು ಹೊತ್ತು ನಿಂತ ಕವಿತೆ ಇದೆ. ಇಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಬಹುಶಃ ಪ್ರಕೃತಿಯ ಕೊಡುಗೆ ಎಂಬದನ್ನು ಬಿಟ್ಟರೆ ಬೇರೆ ಉತ್ತರಗಳಿಲ್ಲವೇನೋ?? ಈ ಕವಿತೆಯ ಸಾಲು: *ಭೂಮಿಯೊಳಗಿನ ಸಸಿಗೆ ಮೊಳಕೆಯಾಗಿ* *ಬರಲು ಹೇಳಿದವರ ಯಾರು..?* *ಚಿಗುರಿದ ಸಸಿಗೆ* *ಹಸಿರ ಸಿರಿ ತುಂಬಿದವರು ಯಾರು..?* ....ಹೀಗೆ ಸಾಗುವ ಕವಿತೆ ಮೋಡಿ ಮಾಡಿದೆ. ಕವನಸಂಕಲನದ *ಮುನ್ನುಡಿ* ಅಮೋಘ ವಿಶ್ಲೇಷಣೆಯೊಂದಿಗೆ ಬೆನ್ನುತಟ್ಟಿದೆ. ಈ ಕಾರ್ಯವನ್ನು ಗುರುವಿನ ಸ್ಥಾನದಲ್ಲಿದ್ದು ಶ್ರೀ ಹುಡಸಪ್ಪ ರಾಮಪ್ಪ ಕನ್ನಡ ಉಪನ್ಯಾಸಕರು ಪ್ರೀತಿಯಿಂದ ಪೂರೈಸಿದ್ದಾರೆ. ಒಟ್ಟಾರೆಯಾಗಿ ಸಾಹಿತ್ಯ ಲೋಕದ ದೃವತಾರೆಯಾಗಿ ಮಿಂಚಲು *ಬಿ. ಪಿ.ಕಟ್ಟಿಮನಿಯವರು* ತಮ್ಮ *ನೀನ್ಯಾರ..?* ಕವನಸಂಕಲನದಿಂದ ಅದ್ದೂರಿಯಾಗಿ ಆರಂಭ ಪಡೆದಿದ್ದಾರೆ. ತಮ್ಮೆಲ್ಲರ ಪ್ರೀತಿಯ ಓದಿಗಾಗಿ .ಬಿ. ಪಿ. ಕಟ್ಟಿಮನಿಯವರನ್ನು ಸಂಪರ್ಕಿಸಿ. (ದೂರವಾಣಿ-9901514538) ಆತ್ಮೀಯತೆಯಿಂದ.... ✍ *ಅಮರೇಶ ಎಂಕೆ*
ಬಿ. ಪಿ. ಕಟ್ಟಿಮನಿ ಅವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ(ಜನನ: 21-07-1992) ಗ್ರಾಮದವರು. ತಂದೆ ಪರಪ್ಪ ಕಟ್ಟೀಮನಿ, ತಾಯಿ ಕಾಂತಮ್ಮ. ಎಂ.ಎಸ್.ಸಿ ಹಾಗೂ ಬಿ.ಎಡ್ ಪದವೀಧರರು. ರಾಯಚೂರು ಜಿಲ್ಲೆಯ ಸಿಂಧನೂರಿನ ಸರಕಾರಿ ಪದವಿ ಮಹಾವಿದ್ಯಾಲಯದ ಭೌತಶಾಸ್ತ್ರ ಉಪನ್ಯಾಸಕರು. ಸದ್ಯ ಅವರು ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ನೀನ್ಯಾರ..? (ಕವನ ಸಂಕಲನ-2020) ಎಂಬುದು ಇವರ ಮೊದಲ ಕೃತಿ. ...
READ MOREಆತ್ಮೀಯ ಕವಿಮಿತ್ರರಾದ *ಬಿ. ಪಿ.ಕಟ್ಟಿಮನಿಯವರ* ಚೊಚ್ಚಲ ಕವನ ಸಂಕಲನ *ನೀನ್ಯಾರ..?* ದಿನಾಂಕ ೧೨/೦೧/೨೦೨೦ ರಂದು ರಾಯಚೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಸ್ಕಿ ತಾಲೂಕಿನಲ್ಲಿ ನಡೆದ ಕವಿವೃಕ್ಷ ಬಳಗದ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಸಾಹಿತ್ಯ ಸಾರಸ್ವತ ಲೋಕಕ್ಕೆ ಲೋಕಾರ್ಪಣೆಗೊಂಡಿತು.
ಕವಿಗಳ ಕನಸಿನ ಕೂಸಾದ ಈ ಸಂಕಲನ ಅದ್ಭುತವಾಗಿ ರಚಿಸಲ್ಪಟ್ಟಿದೆ. ಮೊದಲ ಪ್ರಯತ್ನದಲ್ಲಿ ಓದುಗರನ್ನು ಹಿಡಿದಿಡುವ ಎಲ್ಲಾ ಪೂರಕ ಲಕ್ಷಣಗಳನ್ನೊಂದಿದೆ. ಬಹುತೇಕ ಕವಿತೆಗಳ ಸಾಲುಗಳಲ್ಲಿ ವಿಭಿನ್ನ ಮೋಡಿ ಮಾಡಿದಂತಿದೆ. ವಿಶಿಷ್ಟ ರಚನಾ ಶೈಲಿಯ ಸಾಲುಗಳು ಬಹುವಾಗಿ ಕಾಡುತ್ತವೆ.
ಮೋಜೆಂದರೆ ಹಣ್ಣಾಯಿತು
ಜೂಜೆಂದರೆ ಮಣ್ಣಾಯಿತು
ಇವು *ಚಕ್ಕಾರ* ಕವಿತೆಯ ಸಾಲುಗಳು.. ಚಕ್ಕಾರ, ಪಗಡೆಯಾಟ, ಡಾವಾಟ, ಹೀಗೆ ಹಳ್ಳಿ ಕಟ್ಟೆಯಲ್ಲಿ ಮೋಜಿಗಾಗಿ ಆರಂಭವಾಗುವ ಆಟ ಮುಂದೊಂದು ದಿನ ಜೂಜಾಟವಾಗಿ ಹೊಲ ಮನೆ ಮಾರಿಕೊಂಡು ಸಂಸಾರವನ್ನು ಬೀದಿಪಾಲು ಮಾಡಿದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಹರಿದು ಹೋಗುತ್ತವೆ. ಸಾಮಾಜಿಕ ಕಳಕಳಿಯ ಕವಿತೆ ಸಮಾಜವನ್ನು ತಿದ್ದುವ ಕಾರ್ಯಕ್ಕೆ ಇಳಿದಿದೆ.
೫೦ ಅತ್ಯುತ್ತಮ ಕವಿತೆಗಳನ್ನೊತ್ತ *ನೀನ್ಯಾರ..?* ಕವನಸಂಕಲನದ ಕವಿತೆಗಳು ಒಂದಕ್ಕಿಂತ ಒಂದರಂತೆ ಹೆಚ್ಚು ಅಮೋಘವಾಗಿ ಮೂಡಿ ಬಂದಿವೆ. ಷಟ್ಪದಿಯಲ್ಲಿ ಕವಿಯ ಹಿಡಿತವಿರುವುದೂ ಸಹ ಕೆಲವೊಂದು ಕವಿತೆಗಳಲ್ಲಿ ಸಾಕ್ಷಿಯಾಗಿದೆ.
ಈ ಕವನಸಂಕಲನದಲ್ಲಿನ *ನೀನ್ಯಾರ..?* ಕವಿತೆ ಎಂತವರನ್ನೂ ಕಾಡದೇ ಬಿಡಲಾರದು. ಉತ್ತರವಿಲ್ಲದ ಪ್ರಶ್ನೆಗಳನ್ನು ಹೊತ್ತು ನಿಂತ ಕವಿತೆ ಇದೆ. ಇಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಬಹುಶಃ ಪ್ರಕೃತಿಯ ಕೊಡುಗೆ ಎಂಬದನ್ನು ಬಿಟ್ಟರೆ ಬೇರೆ ಉತ್ತರಗಳಿಲ್ಲವೇನೋ?? ಈ ಕವಿತೆಯ ಸಾಲು:
ಭೂಮಿಯೊಳಗಿನ ಸಸಿಗೆ ಮೊಳಕೆಯಾಗಿ
ಬರಲು ಹೇಳಿದವರ ಯಾರು..?
ಚಿಗುರಿದ ಸಸಿಗೆ
ಹಸಿರ ಸಿರಿ ತುಂಬಿದವರು ಯಾರು..?
....ಹೀಗೆ ಸಾಗುವ ಕವಿತೆ ಮೋಡಿ ಮಾಡಿದೆ.
ಕವನಸಂಕಲನದ *ಮುನ್ನುಡಿ* ಅಮೋಘ ವಿಶ್ಲೇಷಣೆಯೊಂದಿಗೆ ಬೆನ್ನುತಟ್ಟಿದೆ. ಈ ಕಾರ್ಯವನ್ನು ಗುರುವಿನ ಸ್ಥಾನದಲ್ಲಿದ್ದು ಶ್ರೀ ಹುಡಸಪ್ಪ ರಾಮಪ್ಪ ಕನ್ನಡ ಉಪನ್ಯಾಸಕರು ಪ್ರೀತಿಯಿಂದ ಪೂರೈಸಿದ್ದಾರೆ.
ಒಟ್ಟಾರೆಯಾಗಿ ಸಾಹಿತ್ಯ ಲೋಕದ ದೃವತಾರೆಯಾಗಿ ಮಿಂಚಲು *ಬಿ. ಪಿ.ಕಟ್ಟಿಮನಿಯವರು* ತಮ್ಮ *ನೀನ್ಯಾರ..?* ಕವನಸಂಕಲನದಿಂದ ಅದ್ದೂರಿಯಾಗಿ ಆರಂಭ ಪಡೆದಿದ್ದಾರೆ.
- ಅಮರೇಶ ಎಂ.ಕೆ