ವೀಣಾ ಆರ್ ಕಾರಂತ ಅವರು ತನ್ನ ಮನದಾಳದ ಹೊಳಹುಗಳನ್ನು "ನನ್ನಾಸೆ"ಎಂಬ ಕವನ ಸಂಕಲನದಲ್ಲಿ ಕವಿತೆಯಾಗಿಸಿದ್ದಾರೆ. ಸುಮಾರು 50 ಕವನ ಕುಸುಮಗಳು ಇಲ್ಲಿವೆ. ಒಂದೊಂದು ಬಣ್ಣ ಒಂದೊಂದು ಗಂಧ. ಈ ಕವನಗಳಲ್ಲಿ ಎದ್ದು ಕಾಣುವ ಅಂಶವೆಂದರೆ ಉದಿಸಿದ ಆಸೆಗಳನ್ನು ಯೋಜನೆಗಳನ್ನು ವ್ಯಕ್ತಪಡಿಸುವುದು ಕವನದ ಉಡುಪುಗಳ ಬಗ್ಗೆ ಯಾವುದೇ ಕಟ್ಟುಪಾಡುಗಳನ್ನು ಹಾಕಿಕೊಳ್ಳದೆ ಮನಸ್ಸಿಗೆ ಬಂದ ನಿರ್ಮಿತಿಯ ಭಾವಗಳನ್ನು ಪೋಣಿಸಿರುವುದು ವೀಣಾ ಕಾರಂತವರ ಸಾಧನೆ.
ವೀಣಾ ಕಾರಂತ್ ಅವರು ತೀರ್ಥಹಳ್ಳಿ ಸಮೀಪದ ಹೇರಂಬಪುರದವರು. ಅವರ ಆರಂಭಿಕ ಮತ್ತು ಕಾಲೇಜು ಶಿಕ್ಷಣ ಹೊಸನಗರದಲ್ಲಿ ಪೂರ್ಣಗೊಳಿಸಿದರು. ಬಾಲ್ಯದಿಂದಲೇ ಓದು, ನೃತ್ಯ, ಬರವಣಿಗೆ, ಆಟಗಳಲ್ಲಿ ಸದಾ ಮುಂದಿದ್ದರು ಅಂದಿನಿಂದಲೇ ಬರವಣಿಗೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಭಾವಗೀತೆ, ಭಕ್ತಿ ಗೀತೆ, ಜನಪದ ಶೈಲಿಯ ಗೀತೆಗಳು ರಚಿಸಿ ಹಾಡಿದ್ದಾರೆ. ಸಾಕಷ್ಟು ಪತ್ರಿಕೆಗಳಲ್ಲಿ ಅವರ ಕವನ, ಕಥೆ, ಲೇಖನಗಳು ಪ್ರಕಟವಾಗಿವೆ. ಸಮಾಜ ಸೇವೆಯನ್ನು ಹವ್ಯಾಸವಾಗಿ ಮಾಡಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಿಗಳು: ನನ್ನಾಸೆ ...
READ MORE