`ಎದೆ ಹಾಸಿನ ಭಾವ ಹೂಗಳು’ ಅನಸೂಯಾದೇವಿ ಅವರ ಸಮಗ್ರ ಕವಿತೆಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕವಿತೆಗಳ ವಸ್ತು ಚಿಂತನೆ ಮತ್ತು ಅಭಿವ್ಯಕ್ತಿಯ ರೂಪಕಗಳಾಗಿವೆ. ಹೊಸತನದ ಲಯಗಾರಿಕೆಯನ್ನು ನಾವು ಇಲ್ಲಿ ನೋಡಬಹುದಾಗಿದ. ಅಷ್ಟೇ ಅಲ್ಲದೇ ಹೆಣ್ಣಿನ ಅಂತರಂಗದ ವಿಚಾರವನ್ನು ಕವಿತೆಗಳ ರೂಪದಲ್ಲಿ ಕಟ್ಟಿಕೊಟ್ಟಿರುವ ಕವಿಯ ಅಂತರಂಗದ ನೋಟವು ಬಹುವಾಗಿ ಆಕರ್ಷಿಸುತ್ತದೆ.
ಕಥೆಗಾರ್ತಿ, ಕಾದಂಬರಿಗಾರ್ತಿ ಅನಸೂಯಾದೇವಿ ಅವರು ಸಂಗೀತ ವಿದುಷಿ. ಅವರು 1949 ಅಕ್ಟೋಬರ್ 31 ರಂದು ಜನಿಸಿದರು. ಇವರು ಮೂಲತಃ ಬೆಂಗಳೂರಿನ ಬನಶಂಕರಿಯವರು. ತಂದೆ ತಿಮ್ಮಯ್ಯ ಅಡಿಗ, ತಾಯಿ ಕಾವೇರಮ್ಮ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಎಲ್ಲಾ ಪ್ರಕಾರದ ಬರಹಗಳು ಸುಮಾರು 430 ಕ್ಕೂ ಹೆಚ್ಚು ಪ್ರಕಟಗೊಂಡಿವೆ. ಕಾವ್ಯ : ’ಪ್ರಕೃತಿ ಪುರುಷ, ಕೇಶವ ನಮನ, ಅಮ್ಮ ನಿನ್ನ ನೆನಪಿಗೆ, ಅನನ್ಯ’ ಅವರ ಕಾವ್ಯ ಕೃತಿಗಳು. ’ಡಾ. ಅನಸೂಯಾದೇವಿಯವರ ಸಮಗ್ರ ಕತೆಗಳು, ದೀಪದ ಕೆಳಗೆ, ಉರಿಯ ಬೇಲಿ, ಅನಸೂಯ ಕತೆಗಳು’ ಅವರ ಕಥಾ ಸಂಕಲನ. ’ಆಕಾಶದ ಹಾಡು, ...
READ MORE