ಮರ ಬರೆದ ರಂಗೋಲಿ

Author : ಎಚ್.ಎಸ್. ಸತ್ಯನಾರಾಯಣ

Pages 93

₹ 110.00




Year of Publication: 2024
Published by: ಅಲಂಪು ಪ್ರಕಾಶನ
Address: #467, 16ನೇ ಕ್ರಾಸ್, ಬಿಇಎಂಲ್ ಲೇಔಟ್ 1ನೇ ಹಂತ, ಬಸವೇಶ್ವರ ನಗರ, ಬೆಂಗಳೂರು-560079
Phone: 9742003323

Synopsys

‘ಮರ ಬರೆದ ರಂಗೋಲಿ’ ಡಾ.ಎಚ್.ಎಸ್. ಸತ್ಯನಾರಾಯಣ ಅವರ ಹಾಯ್ಕುಗಳ ಸಂಕಲನವಾಗಿದೆ. ಕೃತಿಯ ಕುರಿತು ಎಂ.ಆರ್. ಕಮಲ ಅವರು ಹೀಗೆ ಹೇಳಿದ್ದಾರೆ; "ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನಾಡುವುದು ಹೈಕು” ಎಂಬ ರಚನೆಯೊಂದು ಈ ಸಂಕಲನದಲ್ಲಿರುವುದು ಆಕಸ್ಮಿಕವೇನಲ್ಲ. ಲೋಕ ವ್ಯಾಪರವನ್ನು ಎಚ್ಚರದ ಸೂಕ್ಷ್ಮ ಕಣ್ಣಿಂದ ದರ್ಶಿಸುತ್ತಾ ಆದರೊಳಗಣ ಒಳ ಸುಳಿಗಳನ್ನು ಹದಿನೇಳು ಅಕ್ಷರಗಳಲ್ಲಿ ಹಿಡಿಯುವ ಈ ಆಟ ಓದುಗರ ಭಾವ ಲೋಕವನ್ನು ವಿಸ್ತರಿಸಬಲ್ಲವು. ಅವ್ಯಕ್ತವಾದ, ಅಮೂರ್ತವಾದ ಕಾಣೆಗೆ ಉತ್ತಮ ಮಾದರಿಯಾದ 'ಹಾಯ್ಡುಗಳು' ಡಾ. ಎಚ್. ಎಸ್. ಸತ್ಯನಾರಾಯಣ ಅವರನ್ನು ಗದ್ಯದಿಂದ ಪದ್ಯಗಳೆಡೆಗೆ ಹೊರಳಿಸುವಲ್ಲಿ ಯಶಸ್ವಿಯಾಗಿವೆ. ವಿಮರ್ಶೆ, ಪ್ರಬಂಧ ಗಳಲ್ಲಿ ಮುಳುಗಿದ್ದ ಬರಹಗಾರನೊಬ್ಬನ ಕಾವ್ಯಕಸುವನ್ನು ಎಲ್ಲ ಸೃಜನಶೀಲ ಆಯಾಮದೊಂದಿಗೆ ಕಾಣಿಸಬಲ್ಲ ಇಲ್ಲಿನ ರಚನೆಗಳಲ್ಲಿ ಕಾಣುವ ದೃಷ್ಟಿಕೋನವು ಓದುಗರೆದೆಲ್ಲಿ ಸಕಾರಾತ್ಮಕ ನಿಲುವನ್ನು ಗಟ್ಟಿಗೊಳಿಸಬಲ್ಲವು. ರೆಕ್ಕೆ ಬಲಿತ ಪುಟ್ಟ ಪುಟ್ಟ ಹಕ್ಕಿಗಳು ಅನಂತಕ್ಕೆ, ಕ್ಷಿತಿಜದೆಡೆಗೆ ಹಾರಲು ಹಾತೊರೆಯುವಂತೆ ಇಲ್ಲಿನ ಪುಟ್ಟ ಪಟ್ಟ ಕವಿತೆಗಳು ನಮ್ಮ ಚಿಂತನೆಗೆ ರೆಕ್ಕೆ ಮೂಡಿಸುತ್ತವೆ. ನಮಗೆ ಬೇಕಾದಂತೆ ಅರ್ಥೈಸಿಕೊಂಡು ಸುಖಿಸಬಹುದಾದ ಸಫಲ ರಚನೆಗಳಿವು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಎಚ್.ಎಸ್. ಸತ್ಯನಾರಾಯಣ

ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ...

READ MORE

Related Books