ಯುವ ಕವಿ ಮ.ನಾ. ಪ್ರವೀಣರ ಚೊಚ್ಚಲ ಕವನ ಸಂಕಲನ ಮನದ ಬಂದಾಳ. ಈ ಕವನ ಸಂಕಲನವು ಲೇಖಕನ ಒಡಲಾಳದ ನೋವು,ನಲಿವುಗಳ ನೆನಪಿನ ಬುತ್ತಿಯಾಗಿದೆ. ಪ್ರೀತಿ,ಕರುಣೆ,ಮಮಕಾರ,ಸಹಕಾರ,ಆಕ್ರೋಶ,ಆವೇಶಗಳು ಬಾಲ್ಯದಿಂದ ಇಂದಿನವರೆಗಿನ ಅನುಭವ ಜಗತ್ತಿನ ಸಮಕಾಲೀನ, ಸಮಾಜವಾದಿ, ಜಾತ್ಯಾತೀತ ಮೌಲ್ಯಗಳ ನಂಬಿಕೆಗಳು ಕವಿತೆಗಳಾಗಿ ಹೊರಹೊಮ್ಮಿವೆ. ಮಾನವತ್ವದ ಮನಸುಗಳು ಒಂದಾಗಬೇಕು, ಸಮಾಜದಲ್ಲಿ ಸಹಕಾರ ಜೊತೆಗೆ ಇನ್ನೊಬ್ಬರ ನೋವಿಗೆ ಮಿಡಿಯುವ ಮನಸು ನಮ್ಮದಾಗಬೇಕು ಎಂಬುದು ಕವಿಯ ಆಶಯವಾಗಿದೆ. ಇದು ಇಲ್ಲಿನ ಕವಿತೆಗಳಲ್ಲಿ ವ್ಯಕ್ತಗೊಂಡಿವೆ.
ಯುವ ಬರಹಗಾರ ಎನ್. ಪ್ರವೀಣ ಅವರು ಮ.ನಾ ಪ್ರವೀಣ ಕಾವ್ಯನಾಮದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದವರು. ಮೂಲತಃ ಕೋಲಾರದ ಮಟ್ನಹಳ್ಳಿಯವರಾದ ಇವರು ಜನಿಸಿದ್ದು 1992 ಫೆಬ್ರುವರಿ 6ಂದು. ತಂದೆ ನಾರಾಯಣಸ್ವಾಮಿ, ತಾಯಿ ನಾರಾಯಣಮ್ಮ. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪತ್ರಕರ್ತರಾಗಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಮನದ ಬಂದಾಳ, ನೆನಪಿನ ಬುತ್ತಿ (ಕವನ ಸಂಕಲನ) ಇವರ ಪ್ರಮುಖ ಕೃತಿಗಳು. ...
READ MORE