ಪೂರ್ಣಿಮಾ ಸುರೇಶ್ ಅವರ "ಸಂತೆಯೊಳಗಿನ ಏಕಾಂತ" ಕವನ ಸಂಕಲನದುದ್ದಕ್ಕೂ ಕೇಳಿಸುವುದು ಕವಿತೆಗಳ ಎದೆಬಡಿತ. ಈ ಕವಿತೆಗಳು ಕವಿಕಟ್ಟಿದ ಪದಮಹಲ್ ಅಲ್ಲ, ಅವು ಗರ್ಭಕಟ್ಟಿ ಹುಟ್ಟಿದ ಗರ್ಭಗುಡಿಗಳು, ಒಳಗೆ ಮೂರ್ತಿಗಳು, ಪ್ರತಿಮೆಗಳು. ಕವನ ಸಂಕಲನದಲ್ಲಿ ಅರ್ಥಕ್ಕಿಂತ ಅನುಭೂತಿಗೇ ಪ್ರಾಮುಖ್ಯತೆ. ಇಲ್ಲಿನ ಕಾವ್ಯತಂತ್ರ, ಕೆ. ವಿ. ತಿರುಮಲೇಶ್ ಅವರು ಗಮನಿಸಿದಂತೆ, ಅಪೂರ್ಣ ವಾಕ್ಯಗಳ ಮಾಲೆಗಳು. ಈ ಮಾರ್ಗ ಪೂರ್ಣಿಮಾ ಅವರ ನ್ಯಾಚುರಲ್ ಮಾರ್ಗ. ನಾಟಕಗಳಲ್ಲಿ ವಾಕ್ಯಗಳ ನಡುವಿನ ಅರ್ಧವಿರಾಮಗಳು ಸೂಚಿಸುವಷ್ಟು, ನಿಟ್ಟುಸಿರುಗಳು ಹೇಳಿದಷ್ಟು, ಬಿಕ್ಕಳಿಕೆಯ ಬಿಂದುಗಳು ಪ್ರತಿಫಲಿಸಿದಷ್ಟು ಅರ್ಥ, ಪೂರ್ಣವಾಕ್ಯಗಳು ಹೇಳಲಾರವು. ಇಲ್ಲಿನ ಕವಿತೆಗಳೂ ಅಷ್ಟೇ, ಸಾಕಷ್ಟು ಅಂತರ್‌ಸಂವಾದದಂತೆಯೇ ಪ್ರವಹಿಸುತ್ತವೆ. ಸಂಭಾಷಣೆಗಳಂತೆಯೇ, ಈ ಕವಿತೆಗಳಲ್ಲಿ ಒಟ್ಟು ಮೂರು ಅಂಶಗಳನ್ನು ಗಮನಿಸಬಹುದು. ಸಹಜವಾಗಿ ಗಮನಕ್ಕೆ ಬರುವುದು ಬಾಹ್ಯಕ್ಕೆ ಸ್ಪಂದಿಸುವ, ಗ'ಮನ'ವನ್ನು ಗಮನಿಸುವ ಕಣ್ಣಾಗಿಲುಗಳು. ಅದಕ್ಕೆ ಮೀರಿದ್ದು ಭ್ರೂಮಧ್ಯದ ಮೂರನೆಯ ಕಣ್ಣಿನಂತಹಾ 'ಅಟ್ಟದ ಕಿಂಡಿ' ಎಂಬ ಸುಷುಮ್ಮನಾಡಿ. ಹಾಗಿದ್ದರೆ, ಈ ಅಟ್ಟದಕಿಂಡಿ ತೆರೆದುಕೊಳ್ಳುವುದಾದರೂ ಯಾವುದಕ್ಕೆ?.. ಅದೇ ಈ ಕವಿತೆಗಳ ಜೀವಾಳವಾದ ಹೇಳದೇ ಹೇಳುವ ಅರ್ಥಗಳು, ಓದುಗನ ಅರಿವಿನ ಅಥವಾ ಅರಿವಿನಾಚೆಗಿನ ಅನಹತನಾದದ ಅಲೆಗಳು. ಮೊದಲೇ ಹೇಳಿದಂತೆ ಇಲ್ಲಿ ಕವಿತೆಗಳು ಆರಂಭದಲ್ಲಿ ಅಂಗಳದಲ್ಲಿ ಅಂಬೆಗಾಲಿಕ್ಕುತ್ತ ಮಗುವಿನಂತೆ ಬೊಚ್ಚುಬಾಯಿ ತೆರೆದು ನಗುತ್ತವೆ. ಹಾಗೆಯೇ ಮುಂದುವರೆದು ಮಧ್ಯಮದ ಮಂದ್ರವಾಗುತ್ತದೆ. ಕೊನೆಯಲ್ಲಿ ಸಂತೆಯೊಳಗಿನ ಏಕಾಂತ ಭಾವವಾಗಿ ಭೂತಭೌತಿಕದ ನೆಲೆಯಿಂದ ಕಾಣೆಯಾಚೆಗಿನ ಅನ್ವೇಷಣೆಯತ್ತ ಹೊರಳಿ ಮಾಗುತ್ತದೆ.
ಲೇಖಕಿ, ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿ ಜಿಲ್ಲೆಯ ಹಿರಿಯಡಕದವರು. ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಕಿರುತೆರೆ, ನಾಟಕ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಇಪ್ಪತ್ತೈದು ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ನಾಟಕದ ಬಿ ಗ್ರೇಡ್ ಕಲಾವಿದೆಯೂ ಆಗಿದ್ದಾರೆ. ಸಂಘಟಕಿ ಹಾಗೂ ನಿರೂಪಕಿಯಾಗಿರುವ ಅವರು ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿರುವ ಕನ್ನಡ ಮತ್ತು ಕೊಂಕಣಿ ಭಾಷೆಯ 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಅವರ ‘ಸತ್ಯನಾಪುರದ ಸಿರಿ’ ನಾಡಿನುದ್ದಕ್ಕೂ ಸುಮಾರು 35 ಪ್ರದರ್ಶನಗಳನ್ನು ಕಂಡಿದೆ. ಕರ್ನಾಟಕದ ಪ್ರಶಸ್ತಿಗಳು : ಗ್ಲೋಬಲ್ ಸಿನಿ ...
READ MORE