‘ಜಂಗಮ ಫಕೀರನ ಜೋಳಿಗೆ’ ಕವಿ ಆರಿಫ್ ರಾಜಾ ಅವರ ಕವನ ಸಂಕಲನ. ಮುಸ್ಲಿಂ ಸಂವೇದನೆ ಮತ್ತು ಸೂಕ್ಷ್ಮ ಮಾನವೀಯ ಮೌಲ್ಯಗಳುಳ್ಳ ಇಲ್ಲಿಯ ಕವಿತೆಗಳಲ್ಲಿ ಆರಿಫ್ ಕವಿತೆಗಳನ್ನು ಹೃದ್ಯವಾಗಿಸಿದ್ದಾರೆ. ಮಂತ್ರವೊಂದು ನನ್ನ ಬಳಿ ಇದ್ದಿದ್ದರೆ, ಜಂಗಮ ಫಕೀರನ ಜೋಳಿಗೆ, ಹೊಲಿಗೆಯಂತ್ರದ ಅಮ್ಮಿಯ ಕವಿತೆಗಳು, ಜೈಲು ಹಕ್ಕಿಗಳ ಪ್ರಾರ್ಥನೆ, ಇಂದು ಸಖಿ, ಪ್ರಿಯತಮೆಯ ಮಾತುಗಳು, ಆ ಅಳು ಈಗಲೂ ಅಲ್ಲಿ, ಕಂಬನಿ ಒರೆಸುವ ಕವಿತೆ, ವಸಂತವನು ತಡವಿಕೊಳ್ಳಬಾರದು ಸುಮ್ಮನೆ, ಕನಸಿನ ನವಿಲುಗಳು, ಇರುವೆ ದಾರಿ, ಸಾವಿಗೆ ಸಮಾಧಿ, ಕಾಲಸಾಕ್ಷಿಯ ಕೊಲೆ ಇಂದು, ಕನಸಿಗೆ ನಕಾಶೆಯಿಲ್ಲ, ಸರ್ವಾಧಿಕಾರಿಯೊಡನೆ ಸೇರಿದಂತೆ ಹಲವು ಕವಿತೆಗಳು ಇಲ್ಲಿ ಸಂಕಲನಗೊಂಡಿವೆ. ಈ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಂದಿದೆ. ಸೂಕ್ಷ್ಮಸಂವೇದನೆಯ ಕವಿಯ ಭಾವ ಎಂಥಹವರನ್ನೂ ಮಿಡಿಯುವಂತೆ ಕಾಡುತ್ತದೆ.
2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಆರಿಫ್ ರಾಜ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರಾದರು. 1983 ಡಿಸೆಂಬರ್ 6ರಂದು ಜನಿಸಿದ ಅವರು ರಾಯಚೂರಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬಾಗಲಕೋಟೆಯ ಗವರ್ನಮೆಂಟ್ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್, ಇಳಕಲ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೆದಿರುವ ಹಲವು ಕವಿತೆಗಳು ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ದಿನಕರ ದೇಸಾಯಿ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಇವರು ಅನುವಾದಿತ ಕವಿತೆಗಳು ಪರ್ಷಿಯನ್ ಭಾಷೆಯಲ್ಲಿ ರಚಿತವಾದ ಭಾರತದ ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ, ಯುವ ಪುರಸ್ಕಾರ (2012)