ಪರದೆ ಸರಿದಂತೆ

Author : ಡಿ. ಬಿ. ರಜಿಯಾ

Pages 90

₹ 70.00




Published by: ಕೌದಿ ಪ್ರಕಾಶನ ಶಿವಮೊಗ್ಗ
Phone: 98860 64444

Synopsys

ಡಿ. ಬಿ. ರಜಿಯಾ ಕನ್ನಡದ ಸೂಕ್ಷ್ಮ ಕವಯಿತ್ರಿಯರಲ್ಲಿ ಒಬ್ಬರು. ಇವರ ಕವಿತೆಗಳ ಕುರಿತಂತೆ ಎಸ್. ಜಿ. ಸಿದ್ದರಾಮಯ್ಯ ಹೀಗೆ ಬರೆಯುತ್ತಾರೆ 'ಯಾವುದೇ ಅರಗದ ಸಿದ್ದಾಂತಗಳಿಗೆ ಬದ್ಧವಾಗಿ ಕಾವ್ಯ ಕಟ್ಟುವ ಹವಣಿಕೆ ರಜಿಯಾ ಅವರಲ್ಲಿಲ್ಲ. ಇಲ್ಲಿ ಅನುಭವ ಮಾತಾಡಿದೆ. ಮಾಗಿದ ಮನಸ್ಸು ಆದ ಅನುಭವಗಳನ್ನು ಅವಲೋಕಿಸಿ, ಆಲೋಚಿಸಿ ಕಾವ್ಯಾನುಬಂಧಕ್ಕೆ ಒಳಗು ಮಾಡಿದೆ. ಕಾವ್ಯ ಹೀಗೇ ಇರಬೇಕೆನ್ನುವ ಕಲಾತ್ಮಕ ಸಿದ್ದಾಂತದ ಪರಿಭಾಷಾಪಟುಗಳಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲವೆನ್ನುವಂತೆ ಇವರ ರಚನೆಗಳು ಹರಿದಿವೆ' “ಪರದೆ ಸರಿದಂತೆ' ರಜಿಯಾ ಅವರ ಏಳನೇ ಕೃತಿ. 30ಕ್ಕೂ ಅಧಿಕ ಕವಿತೆಗಳು ಈ ಕೃತಿಯಲ್ಲಿದ್ದು, ಹೆಣ್ಣಾಳು ಒಬ್ಬಳು ಕೂಲಿ ದುಡಿಯುತ್ತಾ ಬದುಕಿನ ಸಂಕಟಗಳನ್ನು ಎದುರಿಸುವ ಪರಿ ಅಸಹಾಯಕತೆಯೇ ಅಥವಾ ಎದೆಗಾರಿಯೇ ಎಂಬ ಪ್ರಶ್ನೆಯನ್ನು ಎತ್ತುವ 'ಕನ್ನಡಿ', ಆಚಾರ ಸಂಪ್ರದಾಯಗಳನ್ನು ನೆಚ್ಚಿಕೊಂಡಿರುವ ಅಸಮಾನತೆಯ ಕುರಿತಂತೆ ಆಕ್ರೋಶ ವ್ಯಕ್ತಪಡಿಸುವ 'ಸ್ವರೂಪ', ಬದುಕಿನ ಯಾತ್ರೆಯ ಅಲೌಕಿಕತೆಯನ್ನು ಯೋಚಿಸುವಂತೆ ಮಾಡುವ 'ಅ-ಅಲೋಕ', ಹಿಂಸೆ, ಕ್ರೌರ್ಯಗಳ ಮೂಲಕ ಕಾಡಾಗುವುದಕ್ಕೆ ಹೊರಟಿರುವ ನಾಡಿನ ಕುರಿತಂತೆ ಕಳವಳ ವ್ಯಕ್ತಪಡಿಸುವ (ಅಭೇದ್ಯ', ಬದಲಾದ ಕಾಲ ಮತ್ತು ಒಂಟಿತನದ ತೀವ್ರತೆಯನ್ನು ಹೇಳುವ 'ಕಾಯುವ ಹೊತ್ತು' ಹೀಗೆ ಬದುಕಿನ ಮಗ್ಗುಲಿನ ಕಡೆಗೆ ಅವರ ಕಣ್ಣುಗಳು ಹರಿಯುತ್ತವೆ. ಸಮಾಜದ ಬೇರೆ ಬೇರೆ ಸಮಸ್ಯೆಗಳು ಲೇಖಕಿಯನ್ನು ಕಾಡಿದ್ದು ಅದು ಈ ಕೃತಿಯಲ್ಲಿ ಕವನವಾಗಿವೆ.

About the Author

ಡಿ. ಬಿ. ರಜಿಯಾ
(26 January 1954)

ಡಿ. ಬಿ. ರಜಿಯಾ  ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ,  ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ‘ವಾಸ್ತವದ ಕನವರಿಕೆ’ ಅವರ ಕಥಾ ಸಂಕಲನವಾಗಿದೆ. ಅವರಿಗೆ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಕೃಷ್ಣಬಾಯಿ ದತ್ತಿ ಬಹುಮಾನ, ಅಮ್ಮ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಬಹುಮಾನ , ಹರಿಹರಶ್ರೀ ಪ್ರಶಸ್ತಿ, ...

READ MORE

Related Books