‘ಬುದ್ಧನ ಮಾರ್ಗದಲ್ಲಿ’ ಲೇಖಕ ಕೃಷ್ಣಮೂರ್ತಿ ಚಮರಂ ಅವರ ಕವನ ಸಂಕಲನ. ಈ ಸಂಕಲನಕ್ಕೆ ಪ್ರೊ.ಅರವಿಂದ ಮಾಲಗತ್ತಿ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಕೃಷ್ಣಮೂರ್ತಿ ಚಮರಂ ರವರು ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಸಾಹಿತ್ಯದ ಕ್ಷೇತ್ರಕ್ಕೆ ಹೊಸಬರೇನಲ್ಲ, ಮನಾಬ್ಧಿ ಕಥಾ ಸಂಕಲನದ ಮೂಲಕ ಕನ್ನಡಿಗರ ಗಮನವನ್ನು ಸೆಳೆದರು. ಅನಾವರಣ, ನೀಲಾಕಾಶ, ಪರಿವರ್ತನೆಯ ಹೆಜ್ಜೆಗಳು, ಮುಂತಾದ ವೈಚಾರಿಕ ಕೃತಿಗಳ ಮೂಲಕ ವಿಶಿಷ್ಟವಾಗಿ ಹೆಸರು ಮಾಡಿದವರು ಎನ್ನುತ್ತಾರೆ ಅರವಿಂದ ಮಾಲಗತ್ತಿ’ ಜೊತೆಗೆ ಪರಿವರ್ತನೆ ಎಂಬ ಪತ್ರಿಕೆಯ ಮೂಲಕ ಕ್ರಿಯಾಶೀಲರಾಗಿದ್ದು ಜನಪರ ಹೋರಾಟಗಾರರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಗೋಪಾಲಕೃಷ್ಣ ಅಡಿಗರು ಈ ದಲಿತ ಕವಿಗಳು ಎಷ್ಟುದಿನ ಹೀಗೆ ಬರೆಯಬಹುದು ಎಂದು ಪ್ರಶ್ನಿಸುತ್ತಲೇ ಮುಂದೆ ಇವರೂ ನಮ್ಮ ಹಾಗೆ ಬರೆಯಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಈ ಆಶಯದ ನೆರಳು ದಲಿತ ಕಾವ್ಯದಲ್ಲೀಗ ಆವರಿಸಿಕೊಳ್ಳುತ್ತಿದೆ. ದಲಿತ ಕಾವ್ಯ ತನ್ನ ದಿಕ್ಕನ್ನು ಬದಲಿಸಿದೆ ಎಂಬುದನ್ನು ಚಮರಂ ರವರ ಬುದ್ಧನ ಮಾರ್ಗದಲ್ಲಿ ಎಂಬ ಈ ಚೊಚ್ಚಲ ಕವನ ಸಂಕಲನ ಸ್ಪಷ್ಟಪಡಿಸುತ್ತದೆ ಎನ್ನುತ್ತಾರೆ ಅರವಿಂದ ಮಾಲಗತ್ತಿ. ಅಲ್ಲದೇ ದಲಿತ ಪರಿಧಿಯನ್ನು ಮೀರಿ ನಿಲ್ಲುವ ವಸ್ತುವಿನಿಂದಾಗಿ ತಮ್ಮ ದಲಿತ ವಸ್ತುವಿದ್ದಾಗಲೂ ಅಷ್ಟೇ ಮೊನಚಾಗಿ ನಿರೂಪಿಸಿದ ಕವನಗಳು ತಕ್ಷಣವೇ ಗಮನ ಸೆಳೆಯುತ್ತವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ನಾಡು ನುಡಿಯ ಕುರಿತು, ಸಾಂಸ್ಕೃತಿಕ ಭಿನ್ನತೆಗಳ ಕುರಿತು ಬರೆದರೂ ನಿರೂಪಿಸುವ ರೀತಿ ಮಾತ್ರ ಹೆಚ್ಚಾಗಿ ದಲಿತ ಸಂವೇದನೆಯಿಂದದ ಕೂಡಿದೆ ಹಾಗೂ ಬುದ್ಧ ಚಿಂತನೆಯ ಮಾರ್ಗದೆಡೆಗೆ ತುಡಿದಿದೆ. ಅಲ್ಲದೇ ಸಾಮಾಜಿಕ ಎಚ್ಚರದ ಕವನಗಳೇ ಹೆಚ್ಚಾಗಿ ಈ ಸಂಕಲನದಲ್ಲಿ ಹಾಸಿಕೊಂಡಿವೆ. ಪ್ರೀತಿ ಪ್ರೇಮ ಪ್ರಣಯದ ಮಾತು ವಯಸ್ಸಿಗನುಗುಣವಾಗಿ ಹರಿದರೂ ಅವುಗಳಿಗೆ ಪರಿಶುದ್ಧತೆಯ ಸ್ಪರ್ಶವಿದೆ. ಈ ಕೃತಿಗೆ 2020ನೇ ಸಾಲಿನ ಮುಳ್ಳೂರು ನಾಗರಾಜ ಪ್ರಶಸ್ತಿ ಲಭಿಸಿದೆ.
ಲೇಖಕ ಡಾ. ಕೃಷ್ಣಮೂರ್ತಿ ಚಮರಂ ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚನ್ನಮಲ್ಲಿಪುರದವರು. ತಂದೆ-ಮಲಿಯಯ್ಯ, ತಾಯಿ- ರಂಗಮ್ಮ. ಪ್ರಾಥಮಿಕ ಶಿಕ್ಷಣವನ್ನು ಗುಂಡ್ಲುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣವನ್ನು ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರೈಸಿದರು. ಆನಂತರ ಪಿಯುಸಿ ವಿಜ್ಞಾನ ವಿಷಯವನ್ನು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪೂರೈಸಿದ ಅವರು ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು, ನಂತರ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್ಸಿ(ಸಸ್ಯಶಾಸ್ತ್ರ), ಎಂ.ಫಿಲ್(ಬೀಜ ತಂತ್ರಜ್ಞಾನ) ಮತ್ತು ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದರು. ವಿದ್ಯಾಭ್ಯಾಸದ ನಂತರ ಕೆಲಕಾಲ ‘ಕರ್ನಾಟಕ ರಿಮೋಟ್ ...
READ MORE