‘ಬಹುಜನ ಕಾವ್ಯ’ ಮುನಿವೆಂಕಟಪ ಅವರ ಕವನಸಂಕಲನವಾಗಿದೆ. ಒಂದು ಸಮಾಜದ ಮುಚ್ಚಿಟ್ಟ ಅದುಮಿದ ಭಾವನೆಗಳೇನೆಂದು ನಮಗೆ ಮನಗಾಣಿಸುವ ಪ್ರಯತ್ನವಾಗಿ ಶೋಷಣೆಯ ಮುಖಗಳನ್ನು ಕವನ-ಕಾವ್ಯಗಳ ಮೂಲಕ ನೀಡಲಾಗಿದೆ.
ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...
READ MOREಹೊಸತು-2002-ಮೇ
ದಲಿತ ಬಂಡಾಯದ ನಂತರ ಮೂಡಿದ ಸಮಾನತೆಯ ಪ್ರಜ್ಞೆಯ ಸಂಕೇತವಾಗಿ ಬಹಳಷ್ಟು ಕ್ರಾಂತಿಕಾರಿ ಸಾಹಿತ್ಯಸಮಾಜದ ಕೆಳವರ್ಗದ ಎಚ್ಚೆತ್ತ ದನಿಯಾಗಿ ನಮ್ಮ ಮುಂದಿದೆ. ಇಲ್ಲಿ ಶತಮಾನಗಳಿಂದ ಧ್ವನಿ ಕಳೆದುಕೊಂಡವರು ಮಾತನಾಡತೊಡಗಿದಾಗ ಒಂದು ಸಮಾಜದ ಮುಚ್ಚಿಟ್ಟ - ಅದುಮಿದ ಭಾವನೆಗಳೇನೆಂದು ನಮಗೆ ಮನಗಾಣಿಸುವ ಪ್ರಯತ್ನವಾಗಿ ಶೋಷಣೆ.