ಸನಾತನತೆ ಮತ್ತು ಆಧುನಿಕ ಏಕತಾನತೆಯ ಮನೋ ವಿಕಾರಗಳನ್ನು ತನ್ನ ಕವನಗಳಲ್ಲಿ ಬಯಲಿಗೆಳೆದಿರುವ ಕವನಗಳು ಈ ಸಂಕಲನದಲ್ಲಿವೆ. ಕವಿ ಲೌಕಿನ ನ್ಯಾಯಾಲಯಗಳನ್ನು ಮೀರಿದ ಆತ್ಮಸಾಕ್ಷಿಯ ನ್ಯಾಯಾಲಯ ನಂಬಿದವರು. ನಕ್ಷತ್ರಗಳಿಗೆ ಕೈಚಾಚಿ ಚಂದ್ರನನ್ನು ಹಿಡಿದಿಡುವ ದೂರದೃಷ್ಟಿ, ಜೇಡಿ ಮಣ್ಣಲ್ಲಿ ಬೊಂಬೆಯ ಮಾಡುವ ಕಲಾ ಕೌಶಲ್ಯ ಭೂಮಿಆಕಾಶಗಳಡಿ ಮರ ಗಿಡಗಳ ನಡುವೆ ಹೊತ್ತ ಕಳೆಯುವ ನಿಸರ್ಗಪಾಠಗಳನ್ನು ಹೊಸಪೀಳಿಗೆಗೆ ಎಳೆಯ ಹೃದಯಗಳಿಗೆ ಬಯಸುವ ಈ ಕವಿಯ ಎಲೆಗೂಡಿನಲ್ಲಿ ಕಾವ್ಯದ ಹಕ್ಕಿಯೊಂದು ಕಾಯುತ್ತಾ ಕಾವು ಕೊಡುತ್ತಾ ಕಣ್ಮುಚ್ಚಿ ಧ್ಯಾನಿಸುತ್ತಿದೆ.