ಭಾವದುಂದುಭಿ

Author : ಈರಣ್ಣ ಮೂಲೀಮನಿ (ಕಸ್ತೂರೀಪ್ರಿಯ)

Pages 120

₹ 100.00




Year of Publication: 2012
Published by: ರಾಗ ಕಲಾವೈಭವ ಸಾಂಸ್ಕೃತಿಕ ಪ್ರತಿಷ್ಠಾನ
Address: ಅಮೀನಗಡ-587112

Synopsys

ಉದಯೋನ್ಮುಖ ಕವಿ-ಕವಯಿತ್ರಿಯರ ಕವನಗಳ ಸಂಕಲನ-ಭಾವ ದುಂದುಭಿ. ಕವಿ ಈರಣ್ಣ ಮೂಲಿಮನಿ (ಕಸ್ತೂರಿ ಪ್ರಿಯ) ಅವರು ಸಂಪಾದಿಸಿದ್ದಾರೆ. ಒಟ್ಟು 69 ಕವನಗಳಿವೆ. ಈ ಪೈಕಿ 8 ಕವನಗಳು ಯುಎಇ ಹಾಗೂ ಯುಎಸ್ ಎ ದಲ್ಲಿ ವಾಸವಿವರ ಕನ್ನಡಿಗರ ಕವನಗಳಾಗಿವೆ. ಕೃತಿಗೆ ಮುನ್ನುಡಿ ಬರೆದ ಡಾ. ಸಿದ್ಧಲಿಂಗಯ್ಯ ‘ಪ್ರತಿ ಕವನ ರಚನೆ ಹಿಂದೆ ಉತ್ಸಾಹವಿದೆ. ದುಬೈ ನಲ್ಲಿರುವ ಈರಣ್ಣ ಮೂಲಿಮನಿ ಅವರು ವಿದೇಶಿ ಕನ್ನಡಿಗರನ್ನು ಕವನ ಸಂಕಲನ ತರುವ ನೆಪದಲ್ಲಿ ಒಂದೆಡೆ ಸೇರಿಸಿ, ಕನ್ನಡ-ಕನ್ನಡಿಗತನ ಹಾಗೂ ಕರ್ನಾಟಕವನ್ನು ತಮ್ಮ ಕರ್ತವ್ಯದ ಮಧ್ಯೆಯೂ ನೆನಪಿಸುವ ಅದಮ್ಯ ಉತ್ಸಾಹ ಮೆರೆದಿದ್ದು ಮಾದರಿಯಾಗಿದೆ. ಸಂಕಲನದ ಪ್ರತಿ ಕವಿಯೂ ಕನ್ನಡದಲ್ಲಿ ಸಾಹಿತ್ಯ ರಚನೆಯ ಉತ್ಸಾಹ ತೋರಿದ್ದು ಸಂತಸದ ಸಂಗತಿ’ ಎಂದು ಪ್ರಶಂಸಿಸಿದ್ದಾರೆ.

About the Author

ಈರಣ್ಣ ಮೂಲೀಮನಿ (ಕಸ್ತೂರೀಪ್ರಿಯ)
(01 June 1961)

ಬಾಗಲಕೋಟೆ ಜಿಲ್ಲೆ ಅಮೀನಗಡದ ಈರಣ್ಣ ಮೂಲೀಮನಿ, ಕವಿಗಳು. ಸದ್ಯ ಬೆಂಗಳೂರಿನಲ್ಲಿ ವಾಸ. ಸುಮಾರು 22 ವರ್ಷದಿಂದ ದುಬೈನಲ್ಲಿ ನೆಲೆಸಿದ್ದು, ಅಲ್ಲಿದ್ದೇ ಹೃದಯ ಪಲ್ಲವಿ-ಕವನ ಸಂಕಲನ (2000) ಪ್ರಕಟಿಸಿದ್ದರು.  2006 ರಲ್ಲಿ ಪ್ರಪ್ರಥಮ ಕನ್ನಡ ಆಡಿಯೋ ಸಿ.ಡಿ. ಹೊರತಂದಿದ್ದಾರೆ. ಚಂದನ ಹಾಗೂ ಸುವರ್ಣ ವಾಹಿನಿಯಲ್ಲಿ ಹೊರನಾಡಿನ "ಕನ್ನಡಿಗರು ದುಬೈ"/ಕನ್ನಡ ಕೂಟ ಯು.ಎ.ಇ. ಕನ್ನಡಪರ ಕೈಂಕರ್ಯ ಹಾಗೂ ಅವರ ಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿದ್ದರು.   2010 ರಿಂದ ದುಬೈನಲ್ಲಿ ‘ಕನ್ನಡ ಪಾಠಶಾಲೆ’ ಆರಂಭಿಸಿ ಹೊರನಾಡ ಕನ್ನಡಿಗರ ಮಕ್ಕಳಿಗೆ ಕನ್ನಡ ಪಾಠ ಹೇಳಿಕೊಡುತ್ತಾ, ಕನ್ನಡ ಕೂಟದ ಗ್ರಂಥಾಲಯ ಪ್ರಾರಂಭಿಸಿ ನಾಡಿನ ಸಂಸ್ಕೃತಿ ಬಗ್ಗೆ ಅಭಿಮಾನ ಮೆರೆದಿದ್ದಾರೆ.  ...

READ MORE

Related Books