‘ಬಿಂಜೆಮುಳ್ಳು’ ಫಾಲ್ಗುಣ ಗೌಡ ಅವರ ರಚನೆಯ ಕವನಸಂಕಲನವಾಗಿದೆ. ಗುಮಟೆಯ ನಾದಕ್ಕೆ ಹೊಂದುವ ಲಯಬದ್ಧ ಸಾಲುಗಳು. ಗದ್ದೆಯ ಏರಿಯ ಮೇಲೆ ನಡೆಯುತ್ತಾ ಸುತ್ತಮುತ್ತಲ ಪ್ರಕೃತಿಯನ್ನು ಸವಿಯುವಾಗ ತಂತಾನೇ ಹೊಮ್ಮಿದ ಆಪ್ತ ಕವನಗಳ ಸಂಕಲನವೇ ಫಾಲ್ಗುಣ ಗೌಡ ಅವರ “ಬಿಂಜೆಮುಳ್ಳು”. ನಿರ್ದಿಷ್ಟವಾದ ವಸ್ತುಗಳನ್ನು ಇಟ್ಟುಕೊಂಡು ರಚಿಸಿದ ಕವನಗಳೆಂದು ವಿಂಗಡಿಸಲಾಗದಿದ್ದರೂ ಕವಿಗಳ ಪ್ರಕೃತಿಯ ಬಗೆಗಿನ ಸೂಕ್ಮ ನೋಟ ಅಯಾಚಿತವಾಗಿ ಅವರ ಕವನಗಳಲ್ಲಿ ವ್ಯಕ್ತವಾಗಿದೆ ಎನ್ನುತ್ತಾರೆ ಮಹೇಶ ಅರಬಳ್ಳಿ.
ಫಾಲ್ಗುಣ ಗೌಡ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಚವೆಯವರು. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು [ಪ್ರವೃತ್ತಿಯಲ್ಲಿ ಬರಹಗಾರಾಗಿದ್ದಾರೆ. ಕವಿತೆ, ಕಥೆ, ವಿಮರ್ಶೆ, ಸಂಗೀತ, ಸಿನಿಮಾ ಅವರ ಆಸಕ್ತಿಯ ಕ್ಷೇತ್ರವಾಗಿದೆ. ವೀರಾಂಜನೇಯ ಜಾನಪದ ಪ್ರಶಸ್ತಿ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ. ಕೃತಿಗಳು: `ಮಾಮೂಲಿ ಮಳೆಯಲ್ಲ’ , `ಅಶಾಂತ ಕಡಲು ಪ್ರಶಾಂತ ಮುಗಿಲು’. ...
READ MORE