‘ನಮ್ಮ ಎಲುಬಿನ ಹಂದರದೊಳಗೆ’ ಕೃತಿಯು ಮೂಡ್ನಾಕೂಡು ಚಿನ್ನಸ್ವಾಮಿ ಅವರ ಆಯ್ದ ಕವಿತೆಗಳ ಸಂಕಲನವಾಗಿದೆ. ಈ ಕೃತಿಯಲ್ಲಿ 80 ಕವನಗಳಿದ್ದು, ಸಂಕಲನದ ಕವನಗಳನ್ನು ಸ್ಥೂಲವಾಗಿ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೆಯದು ಏಕಾಂತದ ಅಥವಾ ಸ್ವಗತದ ಮಾದರಿಯ ಕವನಗಳಾಗಿವೆ. ಎರಡನೆಯದು ಲೋಕಾಂತದ ಅಥವಾ ಸಮಷ್ಟಿ ನೆಲೆಯ ಕವನಗಳು. ಈ ವಿಂಗಡನೆಯು ಕವನಗಳನ್ನು ವಿಶ್ಲೇಷಿಸಲು ಪೂರಕವಾಗಿ ಮಾಡಿದ್ದೇ ಹೊರತು, ಅವೇ ಅಂತಿಮವಲ್ಲ ಎನ್ನುತ್ತಾರೆ ಕೃತಿಯ ಕುರಿತು ಸಬಿಹಾ ಭೂಮೀಗೌಡ. ಇವರೆಗಿನ ಅವರ ಕವನಸಂಕಲನಗಳಿಂದ ಆಯ್ದುಕೊಂಡಿರುವಂತಹ ಕವನಗಳು ಇಲ್ಲಿವೆ. ಎಲ್ಲ ಸಂಕಲನಗಳ ಪ್ರಾತಿನಿಧಿಕ ಕವಿತೆಗಳು ಇದರಲ್ಲಿ ಇವೆಯಾದರೂ ಕೊಂಡಿಗಳು ಮತ್ತು ಮುಳ್ಳುಬೇಲಿಗಳು, ಗೋಧೂಳಿ, ನಾನೊಂದು ಮರವಾಗಿದ್ದರೆ ಹಾಗೂ ಬುದ್ಧ ಬೆಳದಿಂಗಳು ಸಂಕಲನಗಳ ಕವಿತೆಗಳದು ಗರಿಷ್ಟ ಪಾಲು ಇದರಲ್ಲಿದೆ. 1989ರಿಂದ ಇದುವರೆಗಿನ ಕವಿಯ ಕಾವ್ಯದ ಹೆಜ್ಜೆ- ಗುರುತುಗಳನ್ನು ತಿಳಿಯಲು, ಅವರ ಕಾವ್ಯ ಸ್ವರೂಪದ ಮಜಲುಗಳನ್ನು ತೌಲನಿಕ ಅಭ್ಯಾಸಕ್ಕೆ ಒಳಪಡಿಸಲು ಪ್ರಸ್ತುತ ಕೃತಿಯು ಉಪಯುಕ್ತ ಆಕರವಾಗಿದೆ.
ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...
READ MORE