‘ಗಣೆಯ ನಾದ’ ಶಂಕರಕಟಗಿ ಅವರ ಕವನಸಂಕಲನವಾಗಿದೆ. ಗಂಭೀರ ಕಾವ್ಯದ ಗುಣಲಕ್ಷಣದಂತೆ ಈ ಕಾವ್ಯದ ಓದು ಕೂಡ ಆ ತಾಳ್ಮೆಯನ್ನು ನಿರೀಕ್ಷಿಸುತ್ತದೆ. ಹೆಚ್ಚಿನ ಕವಿತೆಗಳು ಉತ್ತರ ಕರ್ನಾಟಕದ ದೇಶೀಯ ಭಾಷೆಯ ಸೊಗಡಿನೊಂದಿಗೆ ಜೀವನ ಪರ ಅಂಶಗಳನ್ನು ತಿಳಿಸುತ್ತ ಸಾಗಿವೆ. ಈ ಕವನ ಸಂಕಲನದಲ್ಲಿ ಒಟ್ಟು ಮೂವತ್ತೇಳು ಕವಿತೆಗಳಿವೆ.
ಶಂಕರ ಕಟಗಿ ಅವರು 1957 ಮೇ 20ರಂದು ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ಉಪನ್ಯಾಸಕರು. ಸರಕಾರಿ ಪದವ ಪೂರ್ವ ಕಾಲೇಜಿನಲ್ಲಿ 1985 ರಿಂದ ಇಂಗ್ಲೀಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, ಕೌಜಗೇರಿ,ಗುಡಿಗೇರಿ, ವಿಜಾಪುರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 3 ವರ್ಷಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಜಿಲ್ಲಾ ನಿರ್ದೇಶಕರಾಗಿಯೂ ಸೇವೆಗೈದಿದ್ದಾರೆ. ಇದ್ದರೆ ಬಿಸಿಲು ಮಳೆ (ಸಮಗ್ರ ಕತೆಗಳ ಸಂಗ್ರಹ). ನೆಲದನಾಲಿಗೆ (ಕಾವ್ಯ), ದಟ್ಟಿ ದಾವಣಿ ಇವರ ಕೃತಿಗಳು. ಗಣೆಯ ನಾದ ಕಾವ್ಯಕ್ಕೆ 2001ನೇ ಸಾಲಿನ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ‘ಸಂವಾದ’ ದ್ವಿಮಾಸಿಕ ಸಂಕಲನದಲ್ಲಿ ಶರೀಫನಿಗೆ, ಇದಿಮಾಯಿ ತಾಯಿ ಹಾಡು, ಕಾವ್ಯ-ಸಂವಹನಶೀಲತೆ ಇತ್ಯಾದಿ, ...
READ MOREಹೊಸತು- 2002- ಸೆಪ್ಟೆಂಬರ್
ಕವಿ ಶಂಕರ ಕಟಗಿಯವರ ಮೂರನೆಯ ಕವನ ಸಂಕಲನ. ಜಾನಪದೀಯ ಹಿನ್ನೆಲೆಯಿರುವ ಇಲ್ಲಿನ ಕೆಲವು ಪದ್ಯಗಳು ರಾಗ ಸಂಯೋಜನೆಯೊಂದಿಗೆ ಆಕಾಶವಾಣಿ ಹಾಗೂ ಬೆಂಗಳೂರು ದೂರದರ್ಶನದ ಮೂಲಕ ಪ್ರಸಾರಗೊಂಡಿವೆ. ಗಂಭೀರ ಕಾವ್ಯದ ಗುಣಲಕ್ಷಣದಂತೆ ಈ ಕಾವ್ಯದ ಓದು ಕೂಡ ತುಂಬ ತಾಳ್ಮೆಯನ್ನು ನಿರೀಕ್ಷಿಸುತ್ತದೆ. ಹೆಚ್ಚಿನ ಕವಿತೆಗಳು ಉತ್ತರ ಕರ್ನಾಟಕದ ದೇಶೀಯ ಭಾಷೆಯ ಸೊಗಡಿನೊಂದಿಗೆ ಜೀವನಪರ ಅಂಶಗಳನ್ನು ತಿಳಿಸುತ್ತ ಸಾಗಿವೆ. ಒಟ್ಟು ಮೂವತ್ತೇಳು ಕವಿತೆಗಳಿವೆ.