ಲಕ್ಷ್ಮೀ ಮುದನೂರು ಅವರ ಕವನ ಸಂಕಲನ ಇಂತಿ ನಿನ್ನ ಹಕ್ಕಿ. ಈ ಕೃತಿಗೆ ನಿಂಗಪ್ಪ ಮುದೆನೂರ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ನನಗೆ 'ಗೆಲುವೇ ಮುಖ್ಯ'ವೆಂದು ದೃಢವಾಗಿ ತನ್ನ ಕಾವ್ಯಕ್ಕೆ ಮನವ ಕೊಟ್ಟು ಬರೆಯುವವರು ನನ್ನ ಶ್ರೀಮತಿ ಲಕ್ಷ್ಮಿ ಮುದೇನೂರು. ತನ್ನ ಅನುಭವ, ಬದುಕಿನ ಅನುಭವ, ಈ ಲೋಕದ ಅನುಭವಗಳಿಗೆ ದನಿಯಾಗಬೇಕೆಂಬುದು ಪ್ರತಿಯೊಬ್ಬ ಕವಿಯ ಅಭೀಷ್ಟೆ ಮತ್ತು ನಿರೀಕ್ಷೆ, ಆ ನಿರೀಕ್ಷೆ ತನ್ನ ಮೊದಲ ಸಂಕಲನ 'ಇಂತಿ ನಿನ್ನ ಹಕ್ಕಿ'ಯಲ್ಲಿ ಹುಸಿಯಾಗದಂತೆ ನೋಡಿಕೊಂಡಿರುವವಳು ಕನ್ನಡದ ಕವಯಿತ್ರಿ ಲಕ್ಷ್ಮಿ ಮುದೇನೂರು. ತನಗನಿಸಿದ್ದನ್ನು ಮರ ಚಿಗುರು ಹೊಸೆದಂತ, ಹಕ್ಕಿ ಹಾಡಿದಂತೆ, ಮಗು ನಕ್ಕಂತೆ, ಹೂವು ಸಹಜವಾಗಿ ಅರಳಿದಂತೆ, ಗಾಳಿ ಬೆಳಗು ಗಂಧವಾದಂತೆ, ಸೂರ್ಯ ಚಂದ್ರರು ಬಾಳಿದಂತೆ, ಸರಿ ಕಡಲು ಸಹಜವಾಗಿ ಸುಖ-ದುಃಖ ಹಂಚಿಕೊಂಡಂತೆ ಹಂಚಿಕೊಂಡಿರುವ ಕಾವ್ಯವಿದು, ಇದಕ್ಕೆ ಸಾಕ್ಷಿ ಅವಳೇ, ಅವಳದೇ ಬದುಕು ಕವಿತೆಯ ಬಾಳನ್ನು ತಿಳಿಯುವ ಸಹೃದಯ ಮನಸ್ಸು ಮಾತ್ರ ನನ್ನದು ಮತ್ತು ನನ್ನಂತಯೇ ನಿಮ್ಮದೂ ಎಂದು ಭಾವಿಸಿರುವೆ.ಇಲ್ಲಿ 'ಇಂತಿ ನಿನ್ನ ಹಕ್ಕಿ ಮನುಷ್ಯನ ಜೊತೆಗೂ ಮಾತಾಡಿದೆ. ದೇವರ ಜೊತೆಗೆ ಸಂವಾದಿಸಿದೆ. ಇಂತಹ ಮಾತು, ಸಂವಾದಗಳು ನನ್ನ ಈ ಕವಯಿತ್ರಿ ಲಕ್ಷ್ಮಿ, ಮುದೇನೂರು ಅವರಿಂದ ಇನ್ನಷ್ಟು ಮಾಗಿ ಹೊರಹೊಮ್ಮಲೆಂದು ಪ್ರೀತಿಯಿಂದ ಆಶಿಸುವೆ ಎಂದಿದ್ದಾರೆ.
ವರಮಹಾಲಕ್ಷ್ಮಿ ಬಿ.ಎಂ ಇವರ ಕಾವ್ಯನಾಮ 'ಲಕ್ಷ್ಮಿ ಮುದೇನೂರು'. ಇವರು ಮೂಲತಃ ದಾವಣಗೆರೆಯವರು.ವಿಜ್ಞಾನ ವಿದ್ಯಾರ್ಥಿನಿಯಾದ ಇವರು ಸಾಹಿತ್ಯದ ಓದು,ಬರಹದಲ್ಲಿ ಆಸಕ್ತಿ.'ಇಂತಿ ನಿನ್ನ ಹಕ್ಕಿ' ಇದು ಇವರ ಚೊಚ್ಚಲ ಕವನ ಸಂಕಲನ.ಇವರು ಗೃಹಿಣಿಯಾಗಿದ್ದು ಇವರ ಮನೆಯವರಾದ ಡಾ.ನಿಂಗಪ್ಪ ಮುದೇನೂರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು. ಹಾಗಾಗಿ ಇವರು ಧಾರವಾಡದಲ್ಲಿ ವಾಸವಾಗಿದ್ದಾರೆ. ...
READ MORE