ಕವಿ ಸಂಗಮೇಶ ತಮ್ಮನಗೌಡ್ರ ಅವರ ಮೊದಲ ಕವಿತಾ ಸಂಕಲನ. 1989ರಲ್ಲಿ ಈ ಕೃತಿ ಪ್ರಕಟಗೊಂಡಿದ್ದು, ಈವರೆಗೆ ಏಳು ಆವೃತ್ತಿಗಳನ್ನು ಕಂಡಿದೆ. ಹ್ಯಾಂಗೈತಿ ನಮ್ಮ ನಾಡು, ಭಾರತ ದೇಶಕ್ಕೆ ಜನಸಂಖ್ಯೆ ಹೆಚ್ಚಾಗಿ ಗೋಳಾಟವಣ್ಣ, ನಮೋ ಭಾರತ ಮಾತೆ, ಒಂದು ದಿನ ಜಾವದಲ್ಲಿ, ಏನು ನಾಜೂಕ ಕಾಲವಪ್ಪ, ಬೆಳೆಯಲೆಮ್ಮ ಭಾರತ, ತೂಕಡಿಸುತ್ತಾ ಕುಳಿತಿದ್ದೇವೆ, ಮಾನವರಾಗುವುದ್ಯಾವಾಗ?, ತುತ್ತಿನ ಚೀಲಕ್ಕೆ ಬದುಕಿದ್ದೇವೆ, ಕನ್ನಡ ಉಳಿಸಿರಿ ಹೀಗೆ ಜನಪದ ಶೈಲಿಯ, ನಾಡಗೀತೆ -ದೇಶಭಕ್ತಿ ಗೀತೆಗಳು ಬರೆಯುವ ಮೂಲಕ ಮಕ್ಕಳ ಗಮನ ಸೆಳೆಯಲಾಗಿದೆ. ,
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MORE