ಹನಿ ಚಿನಕುರುಳಿ

Author : ನಾಗೇಶ ಜಿ. ವೈದ್ಯ

Pages 176

₹ 200.00




Year of Publication: 2022
Published by: ಶ್ರೀಕ್ಷೇತ್ರ ಪ್ರಕಾಶನ
Address: ಫೋರ್ಟ್ ಮೊಹಲ್ಲಾ, ಮೈಸೂರು - 570 004
Phone: 9448074435

Synopsys

ಸುಮಾರು ಐನೂರು ಹನಿಗಳನ್ನು ಹೊಂದಿರುವ ಸಂಕಲನದಲ್ಲಿ ಎರಡು ಭಾಗಗಳಿವೆ. ತಿಳಿ ಹಾಸ್ಯ, ವಿಡಂಬನೆಯ ಹನಿಗಳು ಮೊದಲ ಭಾಗದಲ್ಲಿದ್ದರೆ, ಎರಡನೆಯ ಭಾಗದಲ್ಲಿ ಹೆಣ್ಣಿನ ಹೃದಯಂಗಮ ಭಾವಗಳ ಚೆಲುವಿ ಚಿನಕುರುಳಿಯಿದೆ.

About the Author

ನಾಗೇಶ ಜಿ. ವೈದ್ಯ

ನಾಗೇಶ ಜಿ. ವೈದ್ಯ  ವೃತ್ತಿಯಿಂದ ಬ್ಯಾಂಕರ್, ಪ್ರವೃತ್ತಿಯಿಂದ ಬರಹಗಾರರು.  ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಇವರ ಕತೆ, ಕವನ, ಲೇಖನ, ನಗೆಬರಹ, ಪ್ರಬಂಧ ಹಾಗೂ ಹನಿಗವನಗಳು ಪ್ರಕಟವಾಗಿದೆ. ಆಕಾಶವಾಣಿಯಲ್ಲಿ ಕೂಡ ಬಿತ್ತರಗೊಂಡಿವೆ. ಹಲವು ಪತ್ರಿಕೆಗಳಿಗೆ ಇವರು ಆರ್ಥಿಕ ಕ್ಷೇತ್ರದ ಅಂಕಣಕಾರರೂ ಹೌದು. ಕೆನರಾ ಬ್ಯಾಂಕಿನ ಉನ್ನತ ಅಧಿಕಾರಿ, ಕೇರಳ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಹಾಗೂ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI)ದಲ್ಲಿ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೃತಿಗಳು:  ನನ್ನ ಹಣ ನನ್ನ ಬ್ಯಾಂಕು, ಹಾಸ್ಯ ತೋರಣ, ಹನಿ ಚಿನಕುರುಳಿ, ನಗೆಯ ಹಾಯಿ ದೋಣಿ  ...

READ MORE

Excerpt / E-Books

ಕಚಗುಳಿಯಿಡುವ ಕೆಲವು ಕವನಗಳು : ಬಾರಿ ಬಾರಿ ಹೆರಿಗೆ ಅಲರ್ಜಿ ಅವಳಿಗೆ; ಹಾಗಾಗಿ ಈ ಬಾರಿ ಜನ್ಮವಿತ್ತಳು ಅವಳಿ-ಗೆ !! ಮುನಿಸಿಕೊಂಡಾಕೆಗೆ ವಿಶ್ವ ಸುಂದರಿಯ ನೋಡಿಲ್ಲಿ ಎಂದು ನೀಡಿದೆ ಕನ್ನಡಿ; ನಕ್ಕಳು ನೋಡಿ !! ಕೇಳಬಾರದು ಗಂಡಿನ ವರಮಾನ; ಕಡಿಮೆಯಿದ್ದರೆ ಹೋದೀತು ಗಂಡಿನವರ ಮಾನ !! ಮಂಗ ಮುಚ್ಚಿಕೊಂಡಾಗ ಮಾನವ; ಜನ್ಮ ತಳೆದ ಮಾನವ !! ನನ್ನವ ನನಗೆಂದೂ ತಂದಿಲ್ಲ ಜಾಜಿ, ಮಲ್ಲಿಗೆ; ಕೇಳುತ್ತಾನೆ ಮುಡಿಸಬೇಕೇ ಹೂವನ್ನೇ ಹೂವಿಗೆ ?? ನಲ್ಲನ ನವಿರು ಸ್ಪರ್ಶಕ್ಕೆ ಕರಗಿದ್ದಕ್ಕೆ; ಈಗ ಹುಳಿ ಮಾವು ತಿನ್ನೋ ಬಯಕೆ !! ನಲ್ಲ ಜಡೆ ಹಿಡಿವಾಗ ಸೋಕಿ ಬೆರಳು; ಹೆರಳ ಮಲ್ಲಿಗೆ ನಾಚಿ ನೀರು ನೀರು !!

Related Books