ಕಗ್ಗೆರೆ ಪ್ರಕಾಶ್ ಅವರ ಮೂರನೇ ಕವನ ಸಂಕಲನ ’ಭುವಿಬಾಲೆ’ಯಲ್ಲಿ ಪ್ರೇಮ, ವಿರಹ, ವಿಷಾದ, ಹೆಣ್ಣು-ಗಂಡಿನ ಆಂತರ್ಯದ ನೋವು, ಪ್ರಿಯ-ಪ್ರೇಯಸಿ, ಪತಿ-ಪತ್ನಿ, ಸಂಸಾರ-ಜೀವನದ ಕುರಿತಾಗಿ ಇರುವ ಕವಿತೆಗಳ ಜೊತೆಗೇ ಕವಿ ಗೌರವಿಸುವ ’ಕಿರಂ’, ’ಚಿ.ಶ್ರೀ’, ರಾಜ್ ಕುಮಾರ್ ಮುಂತಾದ ಶ್ರೇಷ್ಠ ವ್ಯಕ್ತಿತ್ವಗಳ ಬಗ್ಗೆಯೂ ಕವನಗಳಿರುವುದು ವಿಶೇಷ.
ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ...
READ MOREಭುವಿ ಬಾಲೆ ಕವನ ಸಂಕಲನದ ಕುರಿತು ಕವಿ ಪ್ರಕಾಶ್ ಕಗ್ಗೆರೆ ಅವರ ಮಾತುಗಳು