ಅರಿವೇ ಪ್ರಮಾಣು

Author : ಮಹಾಂತಪ್ಪ ನಂದೂರ

Pages 208

₹ 200.00




Year of Publication: 2019
Published by: ಪಟ್ಟಣ ಪ್ರಕಾಶನ
Address: ಹುಬ್ಬಳ್ಳಿ

Synopsys

ವಚನ ಸಾಹಿತ್ಯದ ಉಳಿವಿಗಾಗಿ 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ದಿಟ್ಟವಾಗಿ ಹೋರಾಡಿದ ವೀರ ಮಹಿಳೆ ಅಕ್ಕನಾಗಲಾಂಬಿಕೆ. ಅವರ ಕುರಿತಾಗಿ ರಚಿಸಿದ ಕೃತಿ -ಒಮ್ಮುಖ. ಮಹಾಂತಪ್ಪ ನಂದೂರು ಲೇಖಕರು. ಈ ದೀರ್ಘ ಕಾವ್ಯದಲ್ಲಿ ಅವರ ಜೀವನ, ಶರಣ ಸಾಹಿತ್ಯವನ್ನು ಕಟ್ಟಿಕೊಡಲು ಅವರು ಶ್ರಮಿಸಿದ ಹೆಜ್ಜೆಯನ್ನು ಹಾಗೂ ಶರಣ ಸಾಹಿತ್ಯವು ಬೆಳೆದ ಬಗೆಯನ್ನು ಲೇಖಕರು ಚಿತ್ರಿಸಿದ್ದಾರೆ.  ಕೃತಿಗೆ ಡಾ. ಎಚ್‌. ಎಸ್‌. ವೆಂಕಟೇಶಮೂರ್ತಿ ಅವರು ಬೆನ್ನುಡಿ ಬರೆದು, ಲೇಖಕರ ಶರಣ ಕಳಕಳಿಯನ್ನು ಪ್ರಶಂಸಿಸಿದ್ದಾರೆ. 

About the Author

ಮಹಾಂತಪ್ಪ ನಂದೂರ

ಕವಿ ಮಹಾಂತಪ್ಪ ನಂದೂರ ಅವರು ಕಲಬುರಗಿ ತಾಲೂಕಿನ ’ಪಟ್ಟಣ ’ದಲ್ಲಿ(1965) ಜನಿಸಿದರು. ಗ್ರಾಮೀಣ ಹಿನ್ನೆಲೆಯ ಇವರಿಗೆ ಆಧುನಿಕ ಜಗತ್ತು ಸೃಷ್ಟಿಸುವ ತಲ್ಲಣಗಳು ಬಹುವಾಗಿ ಕಾಡುವ ವಿಷಯ. ‘ಉದಕದೊಳಗಣ ಬೆಂಕಿ, ದೂರದ ಪದ, ಜೀವ ಕೊಳಲು’ ಅವರ ಕವನ ಸಂಕಲನಗಳು. ‘ಕಲ್ಯಾಣವೆಂಬ ಪ್ರಣತಿ’ - ಸುನೀತ ಸಂಗ್ರಹ, ಆಯಿತಾರ ಅಮಾಸಿ - ಕಥಾ ಸಂಕಲನ, ಆನಂದ ನಿನಾದ - ವಿಮರ್ಶಾ ಲೇಖನ ಸಂಗ್ರಹ ಅವರ ಮತ್ತಿತರ ಕೃತಿಗಳು. ‘ಕಲ್ಯಾಣವೆಂಬ ಪ್ರಣತಿ’ ಸುನೀತ ಸಂಗ್ರಹ ಕೃತಿಗೆ ಡಾ. ಡಿ. ಎಸ್. ಕರ್ಕಿ ಕಾವ್ಯ ಪುರಸ್ಕಾರ ಹಾಗೂ ಅಮ್ಮ ಪ್ರಶಸ್ತಿ, ಅವರ ‘ಅರಿವೆ ...

READ MORE

Related Books