ಸುಪ್ತ ಸಾಗರದಾಚೆ

Author : ಶೈಲೇಶ್ ಕುಮಾರ್

Pages 166

₹ 200.00




Year of Publication: 2024
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಸುಪ್ತ ಸಾಗರದಾಚೆ’ ಶೈಲೇಶ್ ಕುಮಾರ್ ಎಸ್ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬೆಹವಿದೆ; ಬಿಸಿ ಬಲೂನಿನ ಎತ್ತರದಿಂದ ಹವಳದ ದಂಡೆಯ ಆಳದವರೆಗೆ, ಮರಳುಗಾಡಿನಿಂದ ಮಳೆಕಾಡಿನವರೆಗೆ, ಪುರಾತನ ಸಂಸ್ಕೃತಿಯಿಂದ ಆಧುನಿಕ ತಂತ್ರ ಜ್ಞಾನದವರೆಗೆ, ಮರಳ ದಂಡೆಯಿಂದ ಹಿಮ ಪರ್ವತಗಳವರೆಗೆ, ಅತಿಭೋಗದಿಂದ ಅಧ್ಯಾತ್ಮದವರೆಗೆ, ಅದಿವಾಸಿಗಳಿಂದ ಆಧುನಿಕ ನಾಗರೀಕತೆಯವರೆಗೆ, ಜನಾಂಗೀಯ ಭೇದದಿಂದ ಬಹುಸಂಸ್ಕೃತಿಯ ಸಮಾಜದವರೆಗೆ, ಗಗನಚುಂಬಿಗಳಿಂದ ಹಿಡಿದು ಯುನೆಸ್ಕೋ ಪಾರಂಪರಿಕ ತಾಣಗಳವರೆಗೆ.. ಅಸ್ಟ್ರೇಲಿಯಾದ ಎಲ್ಲಾ ವೈರುಧ್ಯಗಳನ್ನೂ ಕಟ್ಟಿಕೊಡುವ ಈ ಪ್ರವಾಸ ಕಥನ ಓದುಗರನ್ನು ನೇರವಾಗಿ ಆಸ್ಟ್ರೇಲಿಯಾದ ಹೃದಯಕ್ಕೆ ಕರೆದೊಯ್ದು ಪರಿಚಯ ಮಾಡಿಕೊಡುತ್ತದೆ. ಆಸ್ಟ್ರೇಲಿಯಾದ ಮಹಾನಗರಗಳು, ಸಮುದ್ರ ತೀರಗಳು, ಸ್ಮಾರಕಗಳು, ಇತಿಹಾಸ, ಸಾಹಸ, ವನ್ಯಜೀವಿಗಳು, ವನಸಂಪತ್ತು, ಜನಜೀವನ, ಕ್ರಿಕೆಟ್, ಹಬ್ಬ, ತಿಂಡಿ-ತಿನಿಸು, ಭೂವೈವಿಧ್ಯ, ಹವಾಮಾನ - ಈ ಎಲ್ಲವನ್ನೂ ತಾನೇ ಆಸ್ಟ್ರೇಲಿಯಾಕ್ಕೆ ಹೋಗಿ ಬಂದಷ್ಟು ಓದುಗ ಅನುಭವಿಸಬಹುದು. ಕನ್ನಡದ ಕಾವ್ಯ ಜಗತ್ತು ಹಾಗೂ ಕನ್ನಡದ ಮನಸ್ಸು ಆಸ್ಟ್ರೇಲಿಯಾದಲ್ಲೂ ಮೈದಳೆದು ಈ ಪ್ರವಾಸ ಕಥನವನ್ನು ಆಪ್ತವಾಗಿಸುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಶೈಲೇಶ್ ಕುಮಾರ್

ಲೇಖಕ ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಅವರು ಐಟಿ ಉದ್ಯೋಗಿಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಇವರು ಬೆಂಗಳೂರು ವಿವಿಯಿಂದ ಕಂಪ್ಯೂಟರ್‌ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಹಾಗೂ ಪಿಎಚ್‌ಡಿ ಪದವಿ ಅಲ್ಲದೇ ಇನ್‌ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಲವು ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡಿರುವ ಶೈಲೇಶ್ ಕುಮಾರ್ ಅವರು ಪ್ರಸ್ತುತ ಅಮೆಜಾನ್ ಕಂಪೆನಿ ಯಲ್ಲಿ ಸೊಲ್ಯೂಷನ್ಸ್ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಸಂಶೋಧನೆ, ಪುಸ್ತಕ ಬರವಣಿಗೆ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಅಪಾರ ಆಸಕ್ತಿಯುಳ್ಳ ಇವರು ಈವರೆಗೂ, 9 ತಾಂತ್ರಿಕ ಪುಸ್ತಕ, ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರ ಕವನಗಳು ನಾಡಿನ ...

READ MORE

Related Books