ಹಾರುವ ಮುನ್ನ

Author : ಪ್ರವೀಣ್ ಮಾಯಾಕಾರ್

Pages 80

₹ 90.00




Year of Publication: 2016
Published by: ಮಾಯಾಲಿಪಿ ಬುಕ್ಸ್
Address: ಹಿಲ್ಲೆರೋದ್ಸ್ ಗ್ರೆಂದ್, ಲ್ಯಾಗೆನ್ ಹೆತ್ 1102, ಶೀಸ್ತಾ, ಸ್ಟಾಕ್ಹೋಲ್ಮ್- 16446

Synopsys

‘ಹಾರುವ ಮುನ್ನ’ ಪ್ರಮೀಣ್ ಮಾಯಾಕರ್ ಅವರ ಕವನ ಸಂಕಲನ. ಇಲ್ಲಿ ಬಾಲ್ಯದಲ್ಲಿ ಕಂಡ ಒಂದು ಕೀಟದ ಜೀವ ಚಕ್ರ: ಒಂದು ಕೀಟದ ತತ್ತಿ, ಕಕೂನ ಆಗಿ, ಪ್ಯುಪಾ ಆಗಿ, ಲಾರ್ವಾ(ಹುಳು) ಆಗಿ ನಂತರ ಸುಂದರ ವರ್ಣದ ಪಾತರಗಿತ್ತಿಯ ಪಕ್ಕ ಬಲಿತು ಹಾರಾಡುವ ಆ ಹಾರಾಟದ ಸುಂದರ ವರ್ಣದ ವೀಕ್ಷಣೆ. ಪ್ರವೀಣ್ ಅವರು ತನ್ನನ್ನು ಅದರ ಜೊತೆಗೆ ಸೇರಿಸಿಕೊಂಡು ಬಾಲ್ಯದ ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಶಿಕ್ಷಣದ ಬಿ.ಇ. ಮುಗಿಸಿ ಸ್ವೀಡನ್ನಿಗೆ ಹಾರಿ ಎಮ್.ಎಸ್. ಪದವಿಗಳಿಸಿ ವೃತ್ತಿಯಲ್ಲಿ ತೊಡಗಿ ಈಗ 8-10 ವರ್ಷಗಳಾಗಿವೆ. ಭಾರತದಿಂದ ವಿದೇಶಕ್ಕೆ, ವಿದೇಶದಿಂದ ಭಾರತಕ್ಕೆ ಹಾರುವ ಮುನ್ನ ಪಡೆದ ಅನುಭವಗಳನ್ನು ಸಂಗ್ರಹಿಸಿದ ಕವನಗಳೇ ಈ ಸಂಕಲನ.

ಭಾರತದ ಅದೂ ಕನ್ನಡದ ಒಬ್ಬ ಹುಡುಗ ವಿದೇಶದಲ್ಲಿದ್ದುಕೊಂಡು 3-4 ಭಾಷೆಗಳ ಪ್ರಭುತ್ವ ಪಡೆದಿದ್ದರೂ ಕನ್ನಡವನ್ನು ಉಳಿಸಿ ಬೆಳೆಸಿಕೊಂಡಿರುವ ರೀತಿ ಪ್ರಶಂಸನೀಯವಾದದ್ದು, ಕಾವ್ಯ ತನ್ನ ಬದುಕಿನ ಜೊತೆಗೆ, ಉಳಿದವರ ಬದುಕಿಗೂ ಹೊಸ ಕುತೂಹಲ, ಭರವಸೆ ಹುಟ್ಟಿಸಬೇಕು. ಆ ದಿಶೆಯಲ್ಲಿ ಪ್ರವೀಣ್ ಅವರ ಕವನಗಳು ಓದುಗರ ಮನಸ್ಸನ್ನು ಅರಳಿಸುತ್ತದೆ. ತಾನು ಕಂಡುಂಡ ನೋವು ನಲಿವುಗಳನ್ನು ಸಂವೇದಿಸುವಾಗ ಆತನ ಸಾಮಾಜಿಕ ಕಾಳಜಿ ಉದಾರತೆ, ವಿಶಾಲತೆ. ಮಾನವೀಯ ಅಂತಃಕರುಣೆಯಿಂದಾಗಿ ಸೃಜನಶೀಲತೆಯನ್ನು ಬೆಳೆಸಿಕೊಂಡ ಕವಿಯಾಗಿ ಕಾಣುತ್ತಾರೆ. ತನ್ನ ತಾಯಿಯಿಂದ ಪ್ರಾರಂಭಿಸಿ ಕನ್ನಡ, ಭಾರತ ಹಾಗೂ ವಿಶ್ವದ, ಪ್ರಕೃತಿಯ ಮಾತೆಯ ಬಗೆಗಿನ ಕವನಗಳ ಅರಿವು ದಿಗಂತದತ್ತ ಬೆಳೆಯುವ ಭರವಸೆಯನ್ನು ಕವಿಯು ಮೂಡಿಸುತ್ತಾರೆ.

About the Author

ಪ್ರವೀಣ್ ಮಾಯಾಕಾರ್

ಲೇಖಕ ಪ್ರವೀಣ್ ಮಾಯಾಕಾರ ಮೂಲತಃ ಬೆಂಗಳೂರಿನವರು. ಈಗ ಸ್ವೀಡನ್ನಿನ ಸ್ಟಾಕ್ಹೋಲ್ಮ್ ನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಇಂಜಿನೀಯರಿಂಗ್ ಪದವಿ ಪಡೆದು, ನಂತರ ಸ್ವೀಡನ್ನಿನಲ್ಲಿ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತರಾಗಿರುವ ಅವರು ಉದ್ಯಮಿ, ಸಂಗೀತ ಸಂಯೋಜಕ ಹಾಗೂ ಬರಹಗಾರರೂ ಹೌದು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ನಿರ್ಮಾಣ ಹಾಗೂ ಚಿಂತ್ರಸಂಭಾಷಣೆ ಬರೆಯುವುದು ಮತ್ತು ನಟನೆಯಲ್ಲಿ ಅತ್ಯಂತ ಉತ್ಸುಕತೆಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾರುವ ಮುನ್ನ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ...

READ MORE

Related Books