ಇಲ್ಲಿಯ ಒಟ್ಟು 60 ಕವಿತೆಗಳು ಸಾಮಾಜಿಕ ಕಳಕಳಿ, ಹರೆಯದಲ್ಲಿ ಮೂಡುವ ತಲ್ಲಣಗಳನ್ನು ಮೆದು ಪದಗಳ ಮುಖೇನ ಮೆಲುಕು ಹಾಕುತ್ತವೆ. ಹಲವು ಕವಿತೆಗಳು ವಯೋ ಸಹಜ ಪ್ರೀತಿ ಪ್ರೇಮ, ಅನುಭಾವ, ಸಂಸಾರ, ಲೋಕಾನುಭವಗಳ ಮಂಥನದ ಹಸಿಹಸಿಯಾದ ವಸ್ತುವನ್ನೊಳಗೊಂಡಿದೆ.
ರಾಜೇಶ್ ಎಚ್.ಆರ್. ಅವರ ಕವನ ಹೀಗಿದೆ 'ನೈದಿಲೆಯಂತಿದ್ದ ನಯನಗಳು ಈಗ…… ರವಿಯಂತೆ ಉಜ್ವಲಿಸುವ ಬದಲು ಇಬ್ಬನಿಯಂತೆ ಕರಗಿವೆ, ಬತ್ತಿದ ಕಣ್ಣಲ್ಲಿ ಬತ್ತದ ಕಣ್ಣೀರು ಕಂಡೆ ನಿನ್ನೆರಡು ಕಣ್ಣುಗಳಲಿ ನನ್ನ ಕಣ್ಣಬಿಂಬ…!
ಕವಿ ರಾಜೇಶ್ ಬಿ. ಹೊನ್ನೇನಹಳ್ಳಿ, "ಆತ್ಮದೀಪ" ಮತ್ತು "ಕೊಳಲನಾದ" ಕವನ ಸಂಕಲನಗಳನ್ನು ಪ್ರಕಟಿಸಿದ್ದು, ‘ಕಲ್ಲು ಸಕ್ಕರೆ ....ಬತ್ತಳಿಕೆ’ ವಿಮರ್ಶಾ ಕೃತಿ , ‘ಚೆಂದಳಿರು’, ‘ನಕ್ಷತ್ರ ತೆನೆ’, ‘ನನ್ನ ದಿನಗಳು’ ಬಿಡಿ ಬರಹಗಳ ಕೃತಿ ಹೊರತಂದಿದ್ದಾರೆ. ಹಲವು ಸಂಪಾದನಾ ಕೃತಿಗಳಲ್ಲೂ ಇವರ ಕವನಗಳು ಪ್ರಕಟವಾಗಿವೆ. ಪ್ರಸ್ತುತ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ...
READ MORE