ಹಸಿದ ಹೊಟ್ಟೆ

Author : ದಿಲೀಪ ವಿ. ತರನಳ್ಳಿ

Pages 80

₹ 80.00




Year of Publication: 2020
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಬೆಂಗಳೂರು

Synopsys

ಲೇಖಕ ದಿಲಿಪ ವಿ. ತರನಳ್ಳಿ ಅವರ ಕವನ ಸಂಕಲನ-`ಹಸಿದ ಹೊಟ್ಟೆ'.ಲೇಖಕ ಸಂಜೀವಕುಮಾರ ಅತಿವಾಳೆ ಅವರು ಕೃತಿಗೆ ಮುನ್ನುಡಿ ಬರೆದು ‘ಮನುಷ್ಯತ್ವದ ಬೇರುಗಳು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇಲ್ಲಿನ ಕವನಗಳು ಸಮರ್ಥವಾಗಿವೆ. ಓದುಗರಲ್ಲಿ ವೈಚಾರಿಕ ಪ್ರಜ್ಞೆಯನ್ನು ಜಾಗೃತಿಯನ್ನು ತರಬಲ್ಲ ಶಕ್ತಿಯನ್ನುಇಲ್ಲಿಯ ಕವಿತೆಗಳಲ್ಲಿ ಅಡಗಿದೆ. ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ. ಪ್ರತಿಯೊಂದು ಕವನವೂ ಗಟ್ಟಿಯಾದ ಧ್ವನಿಯನ್ನು ಹೊಂದಿರುವುದು ಎದ್ದುಕಾಣುವ ಸಂಗತಿ. ಗಂಭೀರ ಹಾಗೂ ಮೌಲಿಕವಾದ ಚಿಂತನೆಗಳೊಂದಿಗೆ ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ವಿಷಯಗಳ ಕುರಿತ ಕವನಗಳು ಇಲ್ಲಿವೆ. ಗೌತಮ ಬುದ್ಧ, ಏಸುಕ್ರಿಸ್ತ, ಅಣ್ಣ ಬಸವಣ್ಣ, ಅಂಬೇಡ್ಕರ ವಿಚಾರಗಳಿಗೆ ಮಾರುಹೋದ ಕವಿಯೂ ತಮ್ಮ ಕವನಗಳಲ್ಲಿ ಅವರ ಚಿಂತನೆಗಳಿಗೆ ತಮ್ಮದೇ ಜಾಗ ನೀಡಿದ್ದಾರೆ. “ ಹಸಿದ ಹೊಟ್ಟೆ” ಕವನ ಸಂಕಲನವು ವಿಷಯ ವೈವಿಧ್ಯತೆಯಿಂದಾಗಿ ಓದಿಸಿಕೊಂಡು ಹೋಗುತ್ತವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ದಿಲೀಪ ವಿ. ತರನಳ್ಳಿ
(06 June 1990)

ಕವಿ ದಿಲೀಪ ವಿ. ತರನಳ್ಳಿ ಮೂಲತಃ ಬೀದರ ಜಿಲ್ಲೆಯ ತರನಳ್ಳಿ ಗ್ರಾಮದವರು. ಬಿ. ಎಸ್ಸಿ, ಬಿ. ಇಡಿ ಪದವೀಧರರು. ಖಾಸಗಿ ಶಾಲೆಯೊಂದರಲ್ಲಿ  ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯಾಸಕ್ತರು. ಕೃತಿಗಳು: ಹಸಿದ ಹೊಟ್ಟೆ(ಕವನ ಸಂಕಲನ-2020)  ...

READ MORE

Related Books