‘ಬೆಂಬಿಡದ ಗುಂಗು’ ನಾಗರಾಜು ಜಿ.ಬಿ ಅವರ ಕವನ ಸಂಕಲನವಾಗಿದೆ. ಈ ಕೃತಿಯು ಲೇಖಕರ ಚೊಚ್ಚಲ ಕೃತಿಯಾಗಿದೆ. ಇಲ್ಲಿನ ಕವನಗಳು ಪ್ರಕೃತಿಯ ಧ್ವನಿಯಾಗಿದ್ದು ರಮಣೀಯ ಸೌಂದರ್ಯವನ್ನು ವಿವರಿಸುತ್ತದೆ. ಕಾಡಿನ ಕುರಿತ ವಿಚಾರಗಳನ್ನು ಇಲ್ಲಿನ ಕವನಗಳು ಎಳೆಎಳೆಯಾಗಿ ವಿವರಿಸುವಂತಿವೆ.
ನಾಗರಾಜು ಜಿ.ಬಿ ಅವರು ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಭೈರೇನಹಳ್ಲಿ ಗ್ರಾಮದವರು. ಇವರದ್ದು ರೈತ ಕುಟುಂಬ. ಅಪ್ಪಟ ಗ್ರಾಮೀಣ ಸೊಗಡಿನ ಹಿನ್ನೆಲೆಯವರು. ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಬಳ್ಳಾರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ, ಎಂ.ಬಿ.ಬಿ.ಎಸ್ ಪದವಿ ಪಡೆದರು. ಎಂ.ಎಸ್. ರಾಮಯ್ಯ ನಾರಾಯಣ ಹೃದಯಾಲಯದಲ್ಲಿ ಹೃದಯರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ಒಮಾನ್ ದೇಶದ ಮಸ್ಕತ್ ನಲ್ಲಿ ಹೃದಯರೋಗ ತಜ್ಞರಾಗಿದ್ದಾರೆ. ವೃತ್ತಿಯ ಜೊತೆಗೆ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು : ಬೆಂಬಿಡದ ಗುಂಗು, ಮಾಯಾಜಿಂಕೆ ...
READ MORE