‘ಸಾವೊಂದನು ಬಿಟ್ಟು’ ಕೃತಿಯು ಸ್ವಾಮಿ ಪೊನ್ನಾಚಿ ಅವರ ಕವನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಮೂಡ್ನಾಕೂಡು ಚಿನ್ನಸ್ವಾಮಿ ಅವರು, ‘ಕೆಲವರಾದರೂ ಕವಿಗಳಿಗೆ ದಲಿತ -ಬಂಡಾಯವೆಂಬ ಪಂಥದ ಒತ್ತಾಸೆಯ ಅಗತ್ಯವಿಲ್ಲವೆಂದು ಕಾಣುತ್ತದೆ. 90ರ ದಶಕದಲ್ಲಿ ಕಿ.ರಂ.ನಾಗರಾಜ ಮತ್ತು ಡಿ.ಆರ್ ನಾಗರಾಜ್ ಹುಟ್ಟುಹಾಕಲೆತ್ನಿಸಿದ ಜಾಗೃತ ಸಾಹಿತ್ಯ ಎಂಬ ಪಂಥವನ್ನು ಚಾಲೂ ಮಾಡುತ್ತಿರುವಂತೆ ಕೆಲವರು ಬರೆಯುತ್ತಿದ್ದಾರೆ. ಅತ್ಯಂತ ಸಂಕೀರ್ಣವಾಗಿಯೂ ಮತ್ತು ಸರಳವಾಗಿಯೂ ಬರೆಯಲ್ಪಡುತ್ತಿರುವ ಕವಿತೆಗಳು ಈಗ ಓದಿಗೆ ಸಿಗುತ್ತವೆ. ಕಾಮ, ಪ್ರೇಮ, ವಿರಹ, ಹಸಿವು, ಬಡತನ, ಭ್ರಷ್ಟಾಚಾರ ಎಲ್ಲವನ್ನೂ ಕುರಿತು ಹೊಸ ತಲೆಮಾರಿನ ಕವಿಗಳು ಬೇರೊಂದು ಮಜಲಿನಲ್ಲಿ ಬರೆಯುತ್ತಿದ್ದಾರೆ. ಆದ್ದರಿಂದ ನಲವತ್ತು ವರ್ಷಗಳಷ್ಟು ಹಳತವಾಗಿರುವ ದಲಿತ ಬಂಡಾಯವೆಂಬ ನಾಮೆಕ್ಲೇಚರ್ ಅನ್ನು ಬದಲಾಯಿಸಬೇಕಾದ ಕಾಲ ಒದಗಿಬಂದಿದೆ.’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕವಿ, ಕಥೆಗಾರ ಮಹದೇವಸ್ವಾಮಿ ಕೆ.ಎಸ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸ್ವಾಮಿ ಪೊನ್ನಾಚಿ ಎಂದೇ ಗುರುತಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪೊನ್ನಾಚಿಯಲ್ಲಿ 1986ರಲ್ಲಿ ಜನಿಸಿದ ಅವರು, ಪ್ರಾಥಮಿಕ ಶಿಕ್ಷಣವನ್ನು ಪೊನ್ನಾಚಿ ಯಲ್ಲಿ. ಕೊಳ್ಳೇಗಾಲ ಮತ್ತು ಮೈಸೂರಿನಲ್ಲಿ ಉನ್ನತ ವ್ಯಾಸಂಗವನ್ನು ಮುಗಿಸಿ ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರು ಇಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ಪುಸ್ತಕ ಪ್ರಾಧಿಕಾರ ದಿಂದ ಧನ ಸಹಾಯ ಪಡೆದು 2015ರಲ್ಲಿ "ಸಾವೊಂದನ್ನು ಬಿಟ್ಟು " ಮೊದಲ ಕವನ ಸಂಕಲನ ಪ್ರಕಟಣೆಯಾಗಿದೆ. ಈ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ ದೊರೆತಿದೆ ಹಾಗೂ ಮಂಡ್ಯದ adviser ಪತ್ರಿಕೆಯವರು adviser ...
READ MORE