‘ಬೆಳಕಿನ ಕರೆ’ ವಿಷ್ಣು ನಾಯ್ಕ ಅವರ ಕವನಸಂಕಲನವಾಗಿದೆ. ನಮ್ಮ ನಡುವಿನ ಸ್ಪಂದನಗಳನ್ನು ಗಮನಿಸುತ್ತಿರುವ ಅಷ್ಟೇ ಭಾವುಕರಾಗಿ ಪ್ರತಿಕ್ರಿಯಿಸುವ ಅವರದ್ದು ಒಳ್ಳೆಯತನಗಳನ್ನು ಸದಾ ಬಯಸುತ್ತಿರುವ ಹಾಗೂ ನೀಡುತ್ತಿರುವ ಅಪರೂಪದ ಮನಸ್ಸು ಇಲ್ಲಿನ ೪೦ ಕವನಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ.
ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ...
READ MOREಹೊಸತು -2003- ಜನವರಿ
ವಿಷ್ಣು ನಾಯ್ಕರ ಕವನ ಸಂಕಲನವೆಂದರೆ ವಿಶೇಷವಾದದ್ದನ್ನು ಪ್ರಸ್ತುತಪಡಿಸುವ ಒಂದು ಮಾಧ್ಯಮವೆಂದು ಹೇಳಬಹುದು. ಏಕೆಂದರೆ ಇದುವರೆಗಿನ ಅವರ ಕವನಗಳು ಆ ದಾರಿಯಲ್ಲಿಯೇ ಕ್ರಮಿಸುತ್ತ ಬಂದಿವೆ. ನಮ್ಮ ನಡುವಿನ ಸ್ಪಂದನಗಳನ್ನು ಗಮನಿಸುತ್ತಿರುವ ಅಷ್ಟೇ ಭಾವುಕರಾಗಿ ಪ್ರತಿಕ್ರಿಯಿಸುವ ಅವರದ್ದು ಒಳ್ಳೆಯತನಗಳನ್ನು ಸದಾ ಬಯಸುತ್ತಿರುವ ಹಾಗೂ ನೀಡುತ್ತಿರುವ ಅಪರೂಪದ ಮನಸ್ಸು ಇಲ್ಲಿನ ೪೦ ಕವನಗಳು ಈ ದಿಸೆಯಲ್ಲಿ ಕಾಣಬರುತ್ತವೆ.