ಎಸ್. ಮಂಜುನಾಥ್ ರವರ ಚೊಚ್ಚಲ ಕೃತಿ ಚುಕ್ಕಿಚಂದ್ರಮ. ತಮ್ಮ ವಿಜ್ಞಾನ ಜಗತ್ತಿನ ಅಧ್ಯಯನ ಅಧ್ಯಾಪನದ ಜೊತೆಗೆ ವೈಜ್ಞಾನಿಕ ಬರಹಗಳ ಬರವಣಿಗೆಯನ್ನು ತಮ್ಮ ಜೀವನದ ಪ್ರೀತಿಯ ಪ್ರವೃತ್ತಿಯಾಗಿ ಅತಿ ಆಸಕ್ತಿ ಹಾಗು ಆಸ್ಥೆಯಿಂದ ನಿರ್ವಹಿಸುತ್ತಿದ್ದಾರೆ.
ಮಂಜುನಾಥ್ ಸರಳವಾದ ಸಹಜವಾದ ದಿನಬಳಕೆಯ ಭಾಷೆ ಪದಗಳ ಪ್ರಯೋಗದ ಮೂಲಕ ಅಬಾಲವೃದ್ಧರಾದಿಯಾಗಿ ಪಂಡಿತರಿಂದ ಪಾಮರರು ಅಚ್ಚರಿಕಂಗಳಲಿ ಮೆಚ್ಚಿ ಅರಿಯುವ ರೀತಿಯಲ್ಲಿ ಚುಕ್ಕಿಚಂದ್ರಮನ ರೂಪದಿ ವೈಜ್ಞಾನಿಕ ವಿಜ್ಞಾನವನ್ನ ಕನ್ನಡಿಗರ ಮನೆಯಂಗಳಕ್ಕೆ ತಂದು ನೀಡಿದ್ದಾರೆ. ಲೇಖಕರು ಸೂರ್ಯ, ಸೌರಮಂಡಲದ ಸಮಸ್ತ ಕುರುಹುಗಳನ್ನು ರಚನೆಗಳನ್ನು, ಮಾನವನ ಅಂತರಿಕ್ಷದ ಅನ್ವೇಷಣೆಗಳನ್ನು ರಾಗತುಂಬಿ ಹಾಡುವ ರೀತಿಯಲ್ಲಿ ಕವನಗಳನ್ನು ರಚಿಸಿದ್ದಾರೆ. ಅಷ್ಟೆ ಅಲ್ಲದೆ ಸೂರ್ಯ, ಗ್ರಹಣಗಳು, ಶುಕ್ರಸಂಕ್ರಮ, ಚಂದಿರ, ಬುಧ ಗ್ರಹಾದಿಯಾಗಿ ಪ್ಲೂಟೋವರೆಗೆ, ಧೂಮಕೇತು, ನೀಹಾರಿಕೆಗಳ ಕುರಿತಂತೆ ಸ್ಪಷ್ಟ ವ್ಯಾಖ್ಯೆ ಹಾಗು ವಿವರಣೆ ನೀಡಿರುವುದು ವಿಜ್ಞಾನದ ಹೊಸ ಓದುಗರಿಗೆ ಮೂಲ ಮಾಹಿತಿ ಅರಿಯಲು ಅನುಕೂಲವಾಗಿದೆ.
ವಿಜ್ಞಾನ ಲೇಖಕ ಎಸ್. ಮಂಜುನಾಥ ಅವರು ‘ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ’ಯನ್ನು ಸ್ಥಾಪಿಸಿ, ಕಳೆದೊಂದು ದಶಕದಿಂದ ವಿದ್ಯಾರ್ಥಿ ಹಾಗೂ ಯುವ ಜನತೆಯಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನ ಕೇಂದ್ರದ ಅಂತರರಾಷ್ಟ್ರೀಯ ವಸ್ತು ವಿಜ್ಞಾನ ಕೇಂದ್ರದಿಂದ ವಸ್ತು ವಿಜ್ಞಾನದಲ್ಲಿ ಪಿ.ಜಿ. ಡಿಪ್ಲೋಮಾವನ್ನೂ ಪಡೆದಿದ್ದಾರೆ. ವಿಶ್ವವಿಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಜೊತೆ ಸಂಶೋಧನೆಗಳನ್ನು ನಡೆಸಿ, ಲೇಖನಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಇವರದು. ‘ಚುಕ್ಕಿ ಚಂದ್ರಮ, ಚಿವ್ ಚಿವ್ ಗುಬ್ಬಿ, ವೈಚಾರಿಕ ಕವನಗಳು’ ...
READ MORE