’ಈ ಮಳೆಗಾಲ ನಮ್ಮದಲ್ಲ’ ಕೃತಿಯು ಚಲಂ ಹಾಡ್ಲಹಳ್ಳಿ ಅವರ ಕವಿತೆಗಳಾಗಿವೆ. ‘ಈ ಕವಿತೆಗಳು ಪ್ರಕಟವಾಗುವ ಹೊತ್ತಿಗೆ ಸಾಕಷ್ಟು ಬದಲಾವಣೆಗಳಾಗಿದ್ದು, ಇಲ್ಲಿರುವ ಕವಿತೆಗಳನ್ನು ಬರೆಯುವ ಹೊತ್ತಿಗೂ ಪ್ರಕಟವಾಗುವ ಹೊತ್ತಿಗೂ ಅಂತಹ ವ್ಯತ್ಯಾಸವೇನಿಲ್ಲಎನ್ನುತ್ತಾರೆ ಚಲಂ ಹಾಡ್ಲಹಳ್ಳಿ. ಕೆಲವೊಂದು ಸಂಗತಿಗಳು ಇಲ್ಲಿ ಮತ್ತೆ ಮತ್ತೆ ಚಿಂತೆಗೀಡು ಮಾಡುತ್ತವೆ. ಕವಿತೆ ಅಂದರೆ ಭಾವದ ಭಾಷೆ ಎಂಬುದನ್ನು ಪ್ರತಿಯೊಂದು ಪದಗಳಲ್ಲೂ ವಿವರಿಸುತ್ತಾ ಹೋಗುತ್ತಿದ್ದಂತೆ, ಸುಳ್ಳು, ಸತ್ಯ, ಭಾವನೆಗಳ ನಡುವಿನ ತೋಳಲಾಟವನ್ನು ಕಟ್ಟಿಕೊಟ್ಟಿರುವ ರೀತಿ ಭಿನ್ನವಾಗಿದೆ. ಭಾಷೆಗಳ ಪರಿಧಿಯಲ್ಲಿ ಎದೆಯ ಭಾಷೆ, ಹೃದಯದ ಭಾಷೆಯನ್ನು ವಿಶ್ಲೇಷಿಸುತ್ತಾ, ಹೃದಯದ ಭಾಷೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತದೆ. ತನ್ನ ವಾತಾವರಣದೊಳಕ್ಕೆ ನುಗ್ಗಿದ ಯಾವ ವಿಷಯವನ್ನಾದರೂ ಸರಿ ಹಿತವೆನಿಸಿದ್ದನ್ನು ಮಾಡಿಯೇ ತೀರುತ್ತದೆ ’ ಎಂದು ತಮ್ಮ ಕವಿತೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಲಂ ಹಾಡ್ಲಹಳ್ಳಿ ಅವರ ಮೂಲ ಹೆಸರು ಪ್ರಸನ್ನ ಕುಮಾರ್ ಹೆಚ್.ಎನ್. ತಂದೆ- ಹಾಡ್ಲಹಳ್ಳಿ ನಾಗರಾಜ್, ತಾಯಿ- ಭವಾನಿ. ಹಾಡ್ಲಹಳ್ಳಿ ಅವರ ಊರು. ಕವಿಯಾಗಿ, ಕತೆಗಾರರಾಗಿ, ಜೊತೆಗೆ ರಂಗಭೂಮಿಯಲ್ಲಿಯೂ ತೊಡಗಿಕೊಂಡಿರುವ ಚಲಂ ಅವರ ಮೊದಲ ಕತಾಸಂಕಲನ ‘ಪುನರಪಿ’. ಅದಕ್ಕೂ ಮೊದಲು ’ಅವಳ ಪಾದಗಳು’ ಎಂಬ ಕವನ ಸಂಕಲನ ಪ್ರಕಟಗೊಂಡಿತ್ತು. ನಾನಾ ಪತ್ರಿಕೆಗಳಿಗೆ ಕತೆ, ಕವನ, ಲೇಖನಗಳನ್ನು ಬರೆದಿರುವ ಅವರ ಹಲವಾರು ನಾಟಕ ಪ್ರದರ್ಶನಗಳಿಗೆ ದುಡಿದಿದ್ದಾರೆ. ಹಾಸನದ ಜೇನುಗಿರಿ ಎಂಬ ದಿನಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ಜಾಣಗೆರೆ ಪತ್ರಿಕೆ, ಅಗ್ನಿ, ಗೌರಿಲಂಕೇಶ್, ಜನತಾಮಾದ್ಯಮ, ಜನಮಿತ್ರ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ...
READ MORE