ಕವಿ ಜಿ.ಎಸ್. ಶಿವರುದ್ರಪ್ಪ ಅವರ ಕವನ ಸಂಕಲನ-ಚಕ್ರಗತಿ. ಸಾಮಗಾನ, ಚೆಲುವು-ಒಲವು, ದೇವಶಿಲ್ಪ ಸೇರಿದಂತೆ ಒಟ್ಟು 13 ಕವನ ಸಂಕಲನಗಳನ್ನು ರಚಿಸಿರುವ ಕವಿಯು, `ಚಕ್ರಗತಿ' ಕವನ ಸಂಕಲನದಲ್ಲಿ ಅದೇ ರೀತಿಯ ಸಂಕಲ್ಪದ ಓಘವನ್ನು, ಆಶಯವನ್ನು, ಬಯಕೆಯನ್ನು, ಸಂತಸವನ್ನುವ್ಯಕ್ತಪಡಿಸಿದ್ದಾರೆ.
ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...
READ MORE