ಕವಿ ವೈಲೇಶ್ ಪಿ.ಎಸ್ ಅವರ ಕವನ ಸಂಕಲನ-’ಅಮ್ಮ ನಿನಗಾಗಿ’ . ಜಗದ ಸಕಲ ಜೀವ ಸಂಕಲ ಬಗ್ಗೆ ವಾಸ್ತವಿಕತೆಯ ಮೂಲಕ ವಿಶ್ಲೇಷಣೆಯನ್ನು ನೀಡುತ್ತದೆ. ಕವಿ ಹಲವು ಕವನಗಳನ್ನು ವೈವಿಧ್ಯಮಯವಾಗಿ ಜೋಡಿಸಿದ್ದಾರೆ. 'ಪ್ರೇಮ ಸುಧೆ’ ಪ್ರೇಮದ ಮಾರ್ಧವತೆ ಉಣಿಸುವಂತಿದೆ, 'ನವಯುಗಾದಿ’ ಕವನದಲ್ಲಿ ಪ್ರಕೃತಿಯ ವರ್ಣನೆಯೊಂದಿಗೆ ಕವನ ವಾಚಕರಿಗೆ ಶುಭಾಶಯಗಳನ್ನು ಹೇಳುತ್ತಾ, ’ಆನಂದವೆಂದೆ' ಕವನದಲ್ಲಿ ಇಂದಿನ ಕಾಲಕ್ಕೆ ಮಗು ಹೆಣ್ಣೆ ಆಗಲಿ ಗಂಡೇ ಆಗಲಿ ಒಂದೇ ಸಾಕೆಂದು ಜನಜಾಗೃತಿ ಮೂಡಿಸಿರುವುದು ಇಲ್ಲಿ ಭಿನ್ನವಾಗಿದೆ. ಇಲ್ಲಿರುವ 'ಕುಲತಿಲಕ' ಕವನ ಪಟ್ಟವನ್ನು ಕಟ್ಟಿದೆ. 'ವಸಂತನೋಲವು' ಕವನದಲ್ಲಿ ಪ್ರಕೃತಿ ರೂಪವನ್ನೂ ಪ್ರಕೃತಿ ದೌರ್ಜನ್ಯ ಮತ್ತು ಕಾಡು ಮೇಡನ್ನು ಕಟ್ಟಿಕೊಟ್ಟಿದ್ದಾರೆ. ’ತಿರುಗಿ' ಕವನಗಳಲ್ಲಿ ಇಂದಿನ ನೈಜ ಚಿತ್ರಣವಿದೆ. “ನಭೋಮಂಡಲ' ಕಾವ್ಯವು ನಭ ಹೇಗೆ ಉಪಕಾರಿಯಾಗಿದೆ ಎಂದೂ, 'ಸಮರಸ ಜೀವನದಲ್ಲಿ ಸಮಾಜದ ಹೋರಾಟವನ್ನೂ, 'ಸಂದ ಸಮಯ' ದಲ್ಲಿ ಕ್ಲುಪ್ತ ಕಾಲಕ್ಕೆ ಎಲ್ಲವೂ ನಡೆಯಬೇಕೆಂದು ಕವಿ ಹೇಳುತ್ತಾರೆ. ’ಅಂಬೇಡ್ಕರ್' ಕೀಳು ಜಾತಿಯೆಂಬ ತುಚ್ಛ ಭಾವನೆಯ ಕೀಳುಭಾವವನ್ನು ಹೊಂದಿರುವವರಿಗೆ ಸೂಕ್ತ ಉತ್ತರ ನೀಡುವಂತಿದೆ. 'ನಮ್ಮ ಟೀಚರ್' ಕವನದಲ್ಲಿ ವೈಲೇಶ್ ಅವರ ಗುರುಪ್ರೇಮ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತಿದೆ. 'ತ್ಯಾಗ ಮತ್ತು ನೋವು' ಕವನ ಯೋಚನಾಪರವಾಗಿದ್ದು, 'ಪ್ರಮಾದ', ’ವೃದ್ಧರು', ’ನೀರ ನಿರೀಕ್ಷೆ', 'ಕಾದಿಹಳು ಭೂದೇವಿ', ’ತಿಂಗಳ ಸಂಬಳ', ’ಚಡ್ಡಿ ದೋಸ್ತಿ', ಕವನಗಳಲ್ಲೆವೂ ವಾಸ್ತವಿಕತೆಗೆ ಕನ್ನಡಿ ಹಿಡಿದಂತಿದೆ.
ಲೇಖಕ ವೈಲೇಶ್ ಪಿ. ಎಸ್ ಅವರು ಮೂಲತಃ ಕೊಡಗಿನವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿದ್ದಾರೆ. ಕೃತಿಗಳು: ಅಮ್ಮ ನಿನಗಾಗಿ (2018) , ಕಣ್ಮರೆಯಾದ ಹಳ್ಳಿ(2020), ಬೊಮ್ಮಲಿಂಗನ ಸಗ್ಗ(2021) (ಕವನಸಂಕಲನ) ...
READ MORE