ನೀರು ನೀರಡಿಸಿತ್ತು

Author : ಎಂ.ಎಂ. ಕಲಬುರ್ಗಿ

Pages 85

₹ 50.00




Year of Publication: 1997
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು

Synopsys

ಡಾ.ಎಂ.ಎಂ. ಕಲಬುರ್ಗಿ ಕೇವಲ ಸಂಶೋಧಕರು ಮಾತ್ರವಲ್ಲ ಸೃಜನಶೀಲ ಸಾಹಿತ್ಯದ ಮೇಲೂ ಅವರ ದೃಷ್ಟಿ ನೆಟ್ಟಿತ್ತು. ’ನೀರು ನೀರಡಿಸಿತ್ತು' ಅವರ ಮೊದಲ ಸಂಕಲನ. ’ಕವಿಯಾದವನು ಭಾವನೆಗಳನ್ನು ಕಲ್ಪಿಸಿಕೊಂಡು ಬರೆಯುವುದು ಬೇರೆ, ಬದುಕಿ ಬರೆಯುವುದು ಬೇರೆ. ಇಲ್ಲಿಯ ಕವನಗಳೆಲ್ಲ ಸಾಮಾನ್ಯವಾಗಿ ನಾನು ಬದುಕಿದ ಭಾವನೆಗಳ ಭಾಷಾ ಶಿಲ್ಪವೆನಿಸಿವೆ’ ಎಂದು ಸಂಕಲನದಲ್ಲಿ ಹೇಳಿಕೊಂಡಿರುವ ಕಲಬುರ್ಗಿ ಅವರು ವಚನಕಾರ ಅಲ್ಲಮನ ’ನೀರು ನೀರಡಿಸಿತ್ತು’ ಎಂಬ ಮಹತ್ವದ ಸಾಲನ್ನೇ ತಮ್ಮ ಸಂಕಲನದ ಶೀರ್ಷಿಕೆ ಮಾಡಿಕೊಂಡಿದ್ದಾರೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books