ಪಂಚಾಯತಿ

Author : ಹನುಮಂತರಾವ್ ಬಿ. ದೊಡ್ಡಮನಿ

Pages 106

₹ 100.00




Year of Publication: 2016
Published by: ಶಾಂತಕುಮಾರ ಪ್ರಕಾಶನ, ಮಲ್ಲಾಬಾದ
Address: # 6, ಭೀಮನ ನೆರಳು, ಶರಣ ಸಿರಸಗಿ ಮಡ್ಡಿ, ಹೈಕೋರ್ಟ್ ಬಳಿ, ಅಫಜಲಪುರ ರಸ್ತೆ, ಕಲಬುರಗಿ-585103
Phone: 9740623310

Synopsys

ಲೇಖಕ ಹನುಮಂತರಾವ್ ಬಿ. ದೊಡ್ಡಮನಿ ಅವರ ಕವನ ಸಂಕಲನ-ಪಂಚಾಯತಿ. 2011ರಲ್ಲಿ ಕೃತಿಯು ಮೊದಲು ಮುದ್ರಣಗೊಂಡಿತ್ತು. 66 ಕವನಗಳು, 22 ಚುಟುಕುಗಳು ಸೇರಿ ಒಟ್ಟು 85 ಕವನಗಳನ್ನು ಸಂಕಲಿಸಲಾಗಿದೆ. ಸಾಹಿತಿ ಡಾ. ಬಿ.ಎಸ್. ಸಿಂಗೆ ಅವರು ಕೃತಿಗೆ ಮುನ್ನುಡಿ ಬರೆದು ‘ಬುದ್ಧ-ಬಸವ-ಅಂಬೇಡ್ಕರ್ ರಂತಹ ಮಹಾನ್ ಸಮಾಜ ಸುಧಾರಕರ ವಿಚಾರಗಳೇ ಬದುಕಿಗೆ ಶುಭಮಂಗಲ ಎನ್ನುತ್ತವೆ ಇಲ್ಲಿಯ ಕವಿತೆಗಳು. ಸಾಮಾಜಿಕ ನೆಮ್ಮದಿ ಹಾಳು ಮಾಡುವವರಿಗೆ ಎಚ್ಚರಿಕೆ ನೀಡುತ್ತವೆ. ದೇವಿ ಎಲ್ಲಮ್ಮರ ಹೆಸರಿನಲ್ಲಿ ನಡೆಯುವ ಅನಿಷ್ಟ ಆಚರಣೆಗಳನ್ನು ಖಂಡಿಸುತ್ತವೆ. ದೀನ, ದಲಿತ, ಶೋಷಿತರ ನೋವು, ಹಸಿವು, ನಿರಾಸೆ, ದಾರಿದ್ಯ್ರ, ಮೌಢ್ಯತೆ, ರಾಜಕೀಯ ಭ್ರಷ್ಟಾಚಾರ ಇತ್ಯಾದಿಗಳ ಚಿತ್ರಣವು ಕಾವ್ಯಾವಾಗಿಸಿದ ಪರಿ ಗಮನ ಸೆಳೆಯುತ್ತದೆ ಎಂದು ಪ್ರಶಂಸಿಸಿದ್ದಾರೆ.

About the Author

ಹನುಮಂತರಾವ್ ಬಿ. ದೊಡ್ಡಮನಿ
(01 June 1958)

ಲೇಖಕ ಡಾ. ಹನುಮಂತರಾವ್ ಬಿ. ದೊಡ್ಡಮನಿ ಅವರು  ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವೀಧರರು. ಹಿರಿಯ ಶ್ರೇಣಿ ಉಪನ್ಯಾಸಕರಾಗಿ ನಿವೃತ್ತರು. ಬೆಂಗಳೂರು ಹಾಗೂ ಕಲಬುರಗಿ ದೂರದರ್ಶನದಲ್ಲಿ ಬೆಳಗು ಹಾಗೂ ಸಾಹಿತ್ಯ ಸಂಪದ ಕಾರ್ಯಕ್ರಮಗಳಲ್ಲಿ ಇವರ ವಿಚಾರಗಳು ಪ್ರಸಾರವಾಗಿವೆ.  ವಿವಿಧ ವಿಚಾರ ಸಂಕಿರಣ, ಶಿಬಿರ, ಸಮ್ಮೇಳನಗಳಲ್ಲಿ ಉಪನ್ಯಾಸ ಮಂಡಿಸಿದ್ದಾರೆ. ತಂದೆ ಭೀಮಶಾ ದೊಡ್ಡಮನಿ.  ಕೃತಿಗಳು: ನೊಂದವರ ಹಾಡು, ನಮ್ಮ ದೇಶ ನಮ್ಮ ಜನ, ಆಕ್ರೋಶ, ಮರೆಯದ ಮಾಣಿಕ್ಯ, ಪಂಚಾಯತಿ, ಹಚ್ಚಡದ ಪದರಾಗ, ಸೊಲ್ಲೆತ್ತಿ ಹಾಡೇನ, ಖಜೂರಿ ಶ್ರೀ ಕೋರಣೇಶ್ವರ ಕಾವ್ಯ ದರ್ಶನ,(ಕವನ ಸಂಕಲನಗಳು),  ಬೆಳ್ಳಕ್ಕಿ ಮೂಡ್ಯಾವ, ಶಾರಿ ಶ್ಯಾಣಾ ಆದಾಗ (ಕಥಾ ಸಂಕಲನ), ದೇವಿಕಾರ್ಯ, ಏಡ್ಸ್ ...

READ MORE

Related Books