ಪದ್ಯ ಹಾಡಿ ಬುದ್ಧಿ ಕಲಿಸ್ಯಾರ

Author : ಬಸವರಾಜ ಕೆಂಧೂಳಿ

Pages 88

₹ 80.00




Year of Publication: 2016
Published by: ಶ್ರೀ ದಾನೇಶ್ವರಿ ಪ್ರಕಾಶನ
Address: ಶ್ರೀಮತಿ ದಾನಮ್ಮ ಬಸವರಾಜ ಕೆಂಧೂಳಿ,ರಬಕವಿ, ಜಿ: ಬಾಗಲಕೋಟ

Synopsys

ಲೇಖಕ ಬಸವರಾಜ ಕೆಂಧೂಳಿ ಅವರು ಬರೆದ ಕವನ ಸಂಕಲನ-ಪದ್ಯ ಹಾಡಿ ಬುದ್ಧಿ ಕಲಿಸ್ಯಾರ. ಜಾನಪದ ಸಾಹಿತ್ಯದಲ್ಲಿ ಒಲವಿರುವ ಲೇಖಕರು ಸಹಜವಾಗೇ ಜಾನಪದೀಯ ಧಾಟಿಯಲ್ಲಿ ಹಾಗೂ ಹಾಡುಗಳ ಗೇಯೆತೆಯಲ್ಲೇ ಪದ್ಯಗಳನ್ನು ಬರೆದಿದ್ದಾರೆ. ಹೀಗಾಗಿ ಅವುಗಳನ್ನು ಹಾಡುವುದು ಸುಲಭ. ಸ್ವತಃ ಲೇಖಕರು ಗಾಯಕರಾದ್ದರಿಂದ ಇಲ್ಲಿಯ ಪದ್ಯಗಳು ಹಾಡುಗಳಾಗಿ ಪರಿವರ್ತನೆ ಹೊಂದಿವೆ. ಜಾನಪದೀಯ ಕಳಕಳಿಗಳು ಕವನದ ಜೀವಾಳವಾಗಿವೆ. ಪ್ರಕೃತಿ ಪ್ರೇಮ, ಸಾಮಾಜಿಕ ಚಿಂತನೆ, ವ್ಯಕ್ತಿಚಿತ್ರಣಗಳು, ಸಾಧು-ಸಂತರ ಜೀವನ ಸ್ಮರಣೆ ಹೀಗೆ ಕಾವ್ಯಗಳ ವಸ್ತುಗಳಾಗಿದ್ದು, 60 ಕವಿತೆಗಳು ಇಲ್ಲಿ ಸಂಕಲನಗೊಂಡಿವೆ.

About the Author

ಬಸವರಾಜ ಕೆಂಧೂಳಿ
(01 April 1953)

ಬಸವರಾಜ ಮಡಿವಾಳಪ್ಪ ಕೆಂಧೂಳಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹುಣಸ್ಯಾಳ ( 01-04-1953) ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಹಳ್ಳುರಿನಲ್ಲಿ ಹೈಸ್ಕೂಲ್ ಶಿಕ್ಷಣ, ವಿಜಯಪುರದಲ್ಲಿ ಪದವಿ ಪೂರೈಸಿದರು. ರಬಕವಿಯ ಎಂ.ವಿ. ಪಟ್ಟಣ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರು. ಜಾನಪದ ಸಾಹಿತ್ಯದೆಡೆಗೆ ಒಲವು. ಜಾನಪದ ಹಾಡುಗಳ ಸುಮಾರು 42 ಧ್ವನಿ ಸುರುಳಿಗಳು ಬಂದಿವೆ. ಪದ್ಯ ಹಾಡಿ ಬುದ್ಧಿ ಕಲಿಸ್ಯಾರ-ಎಂಬುದು ಇವರ ಕವನ ಸಂಕಲನ. ಬೆಂಗಳೂರಿನ ಅಂತಾರಾಷ್ಟ್ರೀ ಸಾಮಾಜಿಕ ಅಭಿವೃದ್ಧಿ ಸಂಘದವರು ನೀಡುವ ಡಾ. ಅಬ್ದುಲ್ ಕಲಾಂ ಲೈಫ್ ಟ್‌ಐಮ್ ಅಚ್ಯುವ್ ಮೆಂಟ್ ಪ್ರಶಸ್ತಿ, ...

READ MORE

Related Books