ಪದ್ಮಜಾ ಜೋಯಿಸ್ ಅವರ ಶೃಂಗಾರ ಕಾವ್ಯಗಳ ಸಂಕಲನ -ಚಿದ್ವಿಲಾಸ. ಕೃತಿಗೆ ಮುನ್ನುಡಿ ಬರೆದಿರುವ ಲಕ್ಷ್ಮಣ ಕೌಂಟೆ ಅವರು “ಪ್ರಕೃತಿಯನ್ನು ಉಪಮೆಗಳನ್ನಾಗಿ, ಸಾಲೋಪಮೆಗಳನ್ನಾಗಿ ತಮ್ಮ ಕವನಗಳಿಗಾಗಿ ಬಳಸಿಕೊಳ್ಳುವ ಕಲೆ ಪದ್ಮಜಾ ಅವರಿಗೆ ಸಿದ್ಧಿಸಿದೆ. ಅವರು ರಮ್ಯ ವನದ ಕಡು ಹಸಿರನ್ನು, ಹೂಗಳ ಚೆಲುವು ಕೋಮಲತೆಗಳನ್ನು, ತೊರೆ ಹಳ್ಳ ಕೊಳ್ಳಗಳನ್ನು, ನೀರ ಹರಿವನ್ನು; ಆಗಸ ನಕ್ಷತ್ರ ಚಂದ್ರ ಸೂರ್ಯಾದಿಗಳನ್ನು ತಮ್ಮ ಕವಿತೆಯ ವಸ್ತುವಿಗೆ ಪೂರಕ ಉಪಮೆಗಳಾಗಿ ಸಮರ್ಥವಾಗಿ ಬಳಸಿಕೊಳ್ಳಬಲ್ಲರು. ಲಾಲಿತ್ಯ ಪದಗಳ ಬಳಕೆಯಲ್ಲೂ ಪ್ರಾವೀಣ್ಯತೆ ಸಿದ್ಧಿಸಿದೆ. ಅವರು ಕನ್ನಡ ಸಾಹಿತ್ಯ ವಲಯದಲ್ಲಿ ಉತ್ತಮ ಕವಯತ್ರಿಯಾಗಿ ಹೊರ ಹೊಮ್ಮಿದ್ದಾರೆ” ಎಂದು ಕೃತಿ ಬಗ್ಗೆ ವಿಶ್ಲೇಷಿಸಿದ್ದಾರೆ.
ಶಿವಮೊಗ್ಗೆಯ ತೀರ್ಥಹಳ್ಳಿಯವರಾದ ಪದ್ಮಜಾ ಜೋಯ್ಸ್ ಜನಿಸಿದ್ದು ದರಲಗೋಡು ಎಂಬ ಗ್ರಾಮದಲ್ಲಿ. ತಂದೆ ನಾರಾಯಣ ಜೋಯ್ಸ್ ,ತಾಯಿ ಸ್ವರ್ಣ ಜೋಯ್ಸ್. ಕೋಣಂದೂರು ಮತ್ತು ತೀರ್ಥಹಳ್ಳಿಯ ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿರುವ ಇವರು ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿಯನ್ನು ಪಡೆದು ಅದರಲ್ಲಿಯೇ ಬದುಕು ಕಂಡುಕೊಂಡವರು. ಹಲವು ವರ್ಷ ನೆಲಮಂಗಲದ ರುಡ್ ಸೆಟ್ ನಲ್ಲಿ ತರಬೇತುದಾರರಾಗಿಯೂ ಕಾರ್ಯ ನಿರ್ವಹಿಸಿದ ಇವರಿಗೆ ಹತ್ತು ಹಲವು ಕ್ರಿಯಾತ್ಮಕ ಹವ್ಯಾಸಗಳಿವೆ. ಸ್ವಂತ ಫಿನಿಕ್ಸ್ ಎಂಬ ಸಂಸ್ಥೆಯ ಕಟ್ಟಿ ಬಹಳಷ್ಟು ಆಸಕ್ತರಿಗೆ ಕರಕುಶಲ ಕಲೆಯ ಕಲಿಸಿದ ಶ್ರೇಯ ಇವರದು. ಓದು ಮತ್ತು ಬರವಣಿಗೆಯ ಬಗ್ಗೆ ತೀರದ ಶ್ರದ್ಧೆ ಇಟ್ಟುಕೊಂಡಿರುವ ಇವರ ಕತೆ, ...
READ MOREಚಿದ್ವಿಲಾಸ ಶೃಂಗಾರ ಕಾವ್ಯದ ಕುರಿತು ಕವಯತ್ರಿ ಪದ್ಮಜಾ ಜೋಯಿಸ್ ಅವರ ಮಾತು