‘ಹಕ್ಕಿ ಹಾಂಗ’ ಡಿ.ಎನ್. ಅಕ್ಕಿ ಅವರ ಕವನ ಸಂಕಲನವಾಗಿದೆ. ಇದಕ್ಕೆ ಫ.ಗು. ಸಿದ್ದಾಪುರ, ಮುಳವಾಡ ಅವರ ಬೆನ್ನುಡಿ ಬರಹವಿದೆ: ಶ್ರೇಷ್ಠ ಕಲಾವಿದ, ಸಂಶೋಧಕ, ಖ್ಯಾತ ಸಾಹಿತಿ ಹಾಗೂ ಆದರ್ಶ ಶಿಕ್ಷಕರಾದ ಶ್ರೀ ಡಿ.ಎನ್. ಅಕ್ಕಿಯವರು ವೃತ್ತಿಯಿಂದ ಚಿತ್ರಕಲಾ ಶಿಕ್ಷಕರಾದರೂ, ಪ್ರವೃತ್ತಿಯಿಂದ ಬಹುಮುಖ ಪ್ರತಿಭೆಯುಳ್ಳ ವಿದ್ವಾಂಸರೆಂದು ಹೇಳಲು ಹೆಮ್ಮೆ ಎನಿಸುತ್ತದೆ. ಪೆನ್ಸಿಲ್ ಹಿಡಿದರೆ ರೇಖೆಗಳಿಗೆ ಜೀವ ತುಂಬುತ್ತಾರೆ. ಪೆನ್ನು ಹಿಡಿದರೆ ಅಕ್ಷರಗಳಿಗೆ ಭಾವ ತುಂಬುತ್ತಾರೆ. ವೃತ್ತಿಯಿಂದ ನಿವೃತ್ತಿಯಾದರೂ, ಅಕ್ಕಿಯವರು ಪ್ರವೃತ್ತಿಯಿಂದ ಯಾವುದಕ್ಕೂ ನಿವೃತ್ತಿಯಾಗಿಲ್ಲ. ಹಲವಾರು ಶಾಸನಗಳನ್ನು ಅಧ್ಯಯನ ಮಾಡಿ, ಜೈನ ಸಾಹಿತ್ಯಕ್ಕೆ ಹೊಂಬೆಳಕು ನೀಡಿರುವರು. ದೇಹ ಕೃಶವಾದರೂ ಸೇವೆಯಲ್ಲಿ ಖುಷಿ ಕಡಿಮೆಯಾಗಿಲ್ಲ. ನಿತ್ಯ ಓದು - ಬರಹದಲ್ಲಿ ಸಂಶೋಧನೆಯಲ್ಲಿ ವ್ಯಂಗ್ಯ ಚಿತ್ರ ಬಿಡಿಸುವುದರಲ್ಲಿ ಸದಾ ತೊಡಗಿಕೊಂಡಿರುತ್ತಾರೆ. ಇವರು ರಚಿಸಿದ ಕೃತಿಗಳಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಶ್ರೀ ಡಿ.ಎನ್. ಅಕ್ಕಿಯವರು ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವುದನ್ನು ನೋಡಿಯೇ ಆನಂದಿಸಬೇಕು. ಅದು ಶಬ್ದಗಳಿಂದ ಸೆರೆ ಹಿಡಿಯಲು ಸಾಧ್ಯವಿಲ್ಲ. ಛಾಯಾಚಿತ್ರವನ್ನು ಮೀರಿಸುವ ಸುಂದರವಾಗಿ ರಂಗೋಲಿಯಲ್ಲಿ ಅರಳಿಕೊಳ್ಳುತ್ತದೆ. ಅಕ್ಕಿಯವರ ಕೈ ಚಳಕ ವರ್ಣನಾತೀತ. ಇವರ ವ್ಯಂಗ್ಯಚಿತ್ರಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡು, ಓದುಗರ ಮನ ಸೂರೆಗೊಂಡಿವೆ. ಪ್ರೌಢ ಸಾಹಿತ್ಯ, ಮಕ್ಕಳ ಸಾಹಿತ್ಯ ಎರಡರಲ್ಲೂ ಸವ್ಯಸಾಚಿಯಾಗಿ ಗುರುತಿಸಿಕೊಂಡವರು. ಮಕ್ಕಳ ಅಚ್ಚುಮೆಚ್ಚಿನ ಆದರ್ಶ ಶಿಕ್ಷಕರಾಗಿ, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಶ್ರೇಯಸ್ಸು ಇವರದಾಗಿದೆ. ವೃತ್ತಿಯನ್ನು ಗೌರವದಿಂದ ಕಾಯ್ದುಕೊಂಡು, ಪ್ರವೃತ್ತಿಯಲ್ಲಿ ಬೆಟ್ಟದೆತ್ತರ ಬೆಳೆದು ನಿಂತವರು. ಶ್ರೀಯುತರಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅರಸಿಕೊಂಡು ಬಂದಿವೆ. ಅವುಗಳಲ್ಲಿ ಕಳಶಪ್ರಾಯವಾದ ಪ್ರಶಸ್ತಿಯೆಂದರೆ ಕರ್ನಾಟಕ ಘನ ಸರ್ಕಾರ ನೀಡುವ 'ರಾಜ್ಯೋತ್ಸವ ಪ್ರಶಸ್ತಿ'ಯೂ ಒಂದೆಂದು ಹೇಳಬಹುದು. ಸಂಘ-ಸಂಸ್ಥೆಗಳಿಂದ, ಜೈನ ಸಮುದಾಯದಿಂದ ಹಲವಾರು ಪುರಸ್ಕಾರಗಳು ಇವರ ಮುಡಿಗೇರಿವೆ. ಪ್ರಸ್ತುತ ನಿಮ್ಮ ಕೈಯಲ್ಲಿರುವ ಮಕ್ಕಳ ಕೃತಿ 'ಹಕ್ಕಿ ಹಾಂಗ' ತುಂಬಾ ಸುಂದರವಾಗಿ ಮೂಡಿಬಂದಿದೆ. ಅಬಾಲವೃದ್ಧರೂ ಇದನ್ನು ಓದಿ ಆನಂದಿಸಬಹುದು. ತುಂಬಾ ನವನವೀನವಾಗಿದೆ.
ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ. ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ...
READ MORE