ನನ್ನ ಕಾವ್ಯ- ಕವನಸಂಕಲನವಿದು. 30 ಕವನಗಳನ್ನು ಒಳಗೊಂಡಿರುವ ಕೃತಿ. ಕೆಲವರು ಸಾಹಿತ್ಯದ ಯಾವ ಪಂಥಗಳಿಗೆ ಅಂಟಿಕೊಳ್ಳದೆ, ತಮ್ಮ ಪಾಡಿಗೆ ತಾವಿದ್ದುಕೊಂಡು ತಮಗನಿಸಿದ್ದನ್ನು ಬರೆಯುತ್ತಿದ್ದಾರೆ. ಅಂಥವರಲ್ಲಿ ಮಹೇಶ ಮನ್ನಯ್ಯನವರಮಠರು ಒಬ್ಬರು ಎಂದು ಮುನ್ನುಡಿಯಲ್ಲಿ ಡಾ.ಅಶೋಕ ನರೋಡೆ ಹೇಳುತ್ತಾರೆ. ಯುವಜನಾಂಗವಿAದು ಆಧುನಿಕ ಸೆಳೆತಕ್ಕೆ ಸಿಕ್ಕು ಎಂಥೆAಥವೂ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಭಾರವಾದ ಸಂದರ್ಭದಲ್ಲಿ ಮಹೇಶನಂಥವರು ಕಾವ್ಯವನ್ನು ಗಂಭೀರವಾಗಿ ಸ್ವೀಕರಿಸಿರುವುದು ಸಂತಸದ ಸಂಗತಿಯಾಗಿದೆ ಎನ್ನುತ್ತಾರೆ ಅವರು. ‘ನನ್ನ ಕಾವ್ಯ’ ಭರವಸೆಯ ಬದುಕಿನ ಸಂಕೇತವಾಗಿದೆ ಎಂದು ಬೆನ್ನುಡಿಯಲ್ಲಿ ಪ್ರೊ.ಬಿ.ಎಚ್.ಮಾರದ ಬೆನ್ನುತಟ್ಟಿದ್ದಾರೆ.
ಮಹೇಶ ಮನ್ನಯ್ಯನವರಮಠ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಪಟ್ಟಣದವರು. ಕಳೆದ ಮೂರು ದಶಕದಿಂದ ಮಹಾಲಿಂಗಪುರದಲ್ಲಿ ವಾಸವಿದ್ದಾರೆ. ಬಿ.ಕಾಂ ಪದವೀಧರರು. ಧಾರವಾಡ ಹಾಗೂ ವಿಜಯಪುರ ಆಕಾಶವಾಣಿ ಕೇಂದ್ರದಿಂದ ಯುವವಾಣಿಯಲ್ಲಿ ಕಥೆಗಳು ಹಾಗೂ ವರದಿಗಳು ಪ್ರಸಾರವಾಗಿವೆ. ನಾಡಿನ ವಿವಿಧ ಪತ್ರಿಕೆಗಳು ಸೇರಿದಂತೆ ವರದಿಗಾರರಾಗಿ ಕೆಲಸ ಮಾಡಿದ್ದು, ಸದ್ಯ ಪ್ರಜಾವಾಣಿಯ ಮಹಾಲಿಂಗಪುರದ ವರದಿಗಾರರು. ಕೃತಿಗಳು: ನನ್ನ ಕಾವ್ಯ (ಕವನ ಸಂಕಲನ), ಬಾಗಿಲೊಳು ಕೈಮುಗಿದು (ಐತಿಹಾಸಿಕ ದೇವಾಲಯಗಳ ಪರಿಚಯ), ಕಾಡುವ ಮನಸುಗಳು, ಮನಸುಗಳ ಬೆನ್ನತ್ತಿ, ತುಂಬಿದ ಕೊಡಗಳು (ಲಲಿತ ಪ್ರಬಂಧಗಳು) ಪ್ರಶಸ್ತಿ-ಪುರಸ್ಕಾರಗಳು: ‘ನನ್ನ ಕಾವ್ಯ’ ಕವನಸಂಕಲನಕ್ಕೆ ಛಲಗಾರ ಪತ್ರಿಕೆಯಿಂದ ಸಾಹಿತ್ಯ ಶ್ರೀ ...
READ MORE