ರಾಹು ಅಲಂದಾರ ಅವರ ಕವಿತೆಗಳ ಸಂಕಲನ. “ಅಲೆದಾಟ"ದಲ್ಲಿ ಪ್ರಬುದ್ಧತೆ ಮೂಡಿಸಿ ಚಿಂತನೆಗೆ ಪ್ರೇರೆಪಿಸಿದ್ದಾರೆ.ಸಂಗ್ರಹದಲ್ಲಿರುವ ಕವಿತೆಗಳಲ್ಲಿ ಜೀವನದ ನೈಜ ಚಿತ್ರಣವನ್ನು ಕಣ್ಮುಂದೆ ಕಾಣುವಂತೆ ಚಿತ್ರಿಸಿದ್ದಾರೆ.'ಕನ್ನಡದ ತೇರು', 'ಅಮ್ಮ'ನೇಸರ". ದಲಿತಿ','ಸಾಧನೆ'. 'ಪ್ರೀತಿಯ ತವರು', 'ಅಲೆದಾಟ', 'ಆಸ್ಕೋನ್ನತಿ', 'ಅಶಾಶ್ವತ, 'ನತದೃಷ್ಟ''ಹೃದಯಾಲಯ' 'ನನ್ನೊಡತಿ. 'ನೆನಸು', 'ಉಳ್ಳವರು'. 'ಪರಪಂಚ', 'ನನ್ನ ಜನಗಳು' ಈ ಎಲ್ಲಾ ಕವಿತೆಗಳು ಹತ್ತಾರು ಬಾರಿ ಓದಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಪದ್ಯ ರಚನೆಯ ಪಲ್ಲವಿಗಳು ಯುವಕವಿಗಳಗೆ ಸ್ಪೂರ್ತಿಯಾಗುತ್ತವೆ ಎಂದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.
ಲೇಖಕ ರಾಹು ಅಲಂದಾರ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರು. ವೃತ್ತಿಯಲ್ಲಿ ಕಾನ್ ಸ್ಟೇಬಲ್. ಪ್ರಸ್ತುತ ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ನಟನೆ ಹಾಗೂ ಓದುವುದು ಅವರ ಆಸಕ್ತಿ. ಕೃತಿಗಳು : ಮೌನಯಾನ (ಕಾದಂಬರಿ) , ರೆಕ್ಕೆಯ ಹಾಡು (ಕವನ ಸಂಕಲನ), ಬೆಳದಿಂಗಳು (ಆಧುನಿಕ ವಚನ ಸಂಕಲನ), ಅಲೆದಾಟ (ಕವನ ಸಂಕಲನ). ...
READ MORE