ಕಡಲ ಹಕ್ಕಿಯ ರೆಕ್ಕೆ

Author : ಚಿದಾನಂದ ಸಾಲಿ

Pages 293

₹ 200.00




Year of Publication: 2013
Published by: ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಕೇಂದ್ರ
Address: ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಕೇಂದ್ರ, ಎಂಜಿಎಂ ಕಾಲೇಜು ಆವರಣ, ಕುಂಜಿಬೆಟ್ಟು ಅಂಚೆ, ಉಡುಪಿ 576102
Phone: 08202523559

Synopsys

ಕಡೆಂಗೋಡ್ಲು ಕಾವ್ಯಪ್ರಶಸ್ತಿ ಪುರಸ್ಕೃತರ ಆಯ್ದ ಕವಿತೆಗಳ ಸಂಕಲನವನ್ನು ಲೇಖಕ, ಅನುವಾದಕರಾದ ಚಿದಾನಂದ ಸಾಲಿಯವರು ’ಕಡಲ ಹಕ್ಕಿಯ ರೆಕ್ಕೆ’ ಪುಸ್ತಕದಲ್ಲಿ ಸಂಪಾದಿಸಿ ಹೊರತಂದಿದ್ದಾರೆ. ಯಾವುದೇ ಭಾಷೆಯ ವರ್ತಮಾನದ ಪ್ರತಿಭೆಯೊಂದು ಅದರ ಕಾವ್ಯಪರಂಪರೆಯ ಸತ್ವವನ್ನು ಹೀರಿಕೊಂಡು ಹೊಸ ಆಯಾಮದ ಮತ್ತು ಅದರ ಕಲಾತ್ಮಕ ಮುಂದುವರಿಕೆಯ ರೂಪದಲ್ಲಿ ಪ್ರಕಟಗೊಳ್ಳುತ್ತ ಸಾಗುತ್ತದೆ. ಅಂತೆಯೇ ಕಾವ್ಯಲೋಕದ ಕನ್ನಡಿಯಂತಿರುವ ’ಕಡಲ ಹಕ್ಕಿಯ ರೆಕ್ಕೆ’ ಪುಸ್ತಕ ಒಂದು ಪ್ರಶಸ್ತಿಯ ಇತಿಹಾಸದ ಬಗ್ಗೆ, ಅದರ ಹಿನ್ನೆಲೆಯಲ್ಲೇ ಅದರ ಅಘೋಷಿತ ಇತಿಹಾಸದ ಮುನ್ನೋಟಗಳನ್ನು ಗ್ರಹಿಸಿ ದಾಖಲುಮಾಡಿದೆ. 

 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books