ಕೋವಿ ಮತ್ತೂ ಗುಬ್ಬಿ ಗೂಡು- ಹನುಮಂತ ಅನಂತ ಪಾಟೀಲ್ ಅವರ ಮೊದಲ ಕವನ ಸಂಕಲನ. ಪೊಲೀಸ್ ಇಲಾಖೆಯಲ್ಲಿ ದಶಕಗಳ ಕಾಲ ವೃತ್ತಿಯಲ್ಲಿದ್ದು, ನಿವೃತ್ತರಾಗಿದ್ದಾರೆ. ಖಾಕಿಯೊಳಗೆ ಇದ್ದು ಕವಿತೆಯೊಂದಿಗೆ ಅನುಸಂಧಾನ ಮಾಡಿಕೊಳ್ಳುತ್ತಾ ಅತ್ಯಂತ ಸರಳ, ಸಜ್ಜನಿಕೆಯಿಂದ ತಾವು ಒಪ್ಪಿಕೊಂಡು ಬಂದ ತತ್ವಾದರ್ಶಗಳೊಂದಿಗೆ ಬಾಳುತ್ತಿರುವವರು, ಪ್ರಾಮಾಣಿಕತೆ-ಮಾನವೀಯತೆಯ ಸ್ವರೂಪ ಅವರು. ಹಿಂಸೆಯ ರೂಪಕವಾದ ಕೋವಿ ಮೂಲೆ ಸೇರಬೇಕು, ಅದರ ಸುತ್ತ ಜೇಡ ಬಲೆ ಹೆಣೆಯಬೇಕು. ಕೊನೆಗೊಮ್ಮೆ ಗುಬ್ಬಚ್ಚಿ ಅದರ ಮೇಲೆ ಗೂಡು ಕಟ್ಟಿ ಹಿಂಸೆ ಶಾಶ್ವತವಾಗಿ ತೊಲಗಬೇಕು ಎಂಬುದು ಕವಿಯ ಆಶಯ. ವೈಚಾರಿಕತೆ, ಜಾತ್ಯಾತೀತ ಆದರ್ಶಗಳಲ್ಲಿ ನಂಬಿಕೆ ಇಟ್ಟಿರುವ ಈ ಕವಿ ತಮ್ಮ ಕವನಗಳ ಮೂಲಕ ಅಂತಿಮವಾಗಿ ಹೊಸದೊಂದು ಸಮಾಜದ ಕನಸು ಕಾಣುತ್ತಾರೆ. ಸ್ವರ್ಗದ ಭ್ರಮೆಗಳನ್ನು ತಿರಸ್ಕರಿಸಿ ಈ ಭೂಮಿಯ ಬದುಕಿಗಾಗಿ ಇಲ್ಲಿಯ ಕವಿ ಹಂಬಲಿಸುತ್ತಾರೆ. ಬಂದಿದೆ ಬಂದಿದೆ ಸ್ವಾತಂತ್ರ ! ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆ ಏತಕೆ ಬಂದಿದೆ ಸ್ವಾತಂತ್ರ? ದೇಶಕೆ ಇಲ್ಲದ ಕೋಶಕೆ ಇಲ್ಲದ ಸಾಮಾನ್ಯನಿಗಿಲ್ಲದ ಸ್ವಾತಂತ್ರ ಎಂದು ಸ್ವಾತಂತ್ರೋತ್ತರ ಭಾರತದ ಸ್ಥಿತಿಗಾಗಿ ಮರುಕಪಡುವ ಕವಿ, ನಿಜ ಸ್ವಾತಂತ್ರ್ಯದ ಕನಸು ಕಾಣುತ್ತಾರೆ.
ಹನುಮಂತ ಅನಂತ ಪಾಟೀಲ ( ಹ.ಅ.ಪಾಟೀಲ) ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದವರು. 1948ರ ಜೂನ್ 1 ರಂದು ಜನನ. ಧಾರವಾಡ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ. ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಪ್ರೌಢಶಿಕ್ಷಣ, ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ (ಸಿವಿಲ್) ಪೇದೆಯಾಗಿ (1975 ಏಪ್ರಿಲ್) ಸೇರ್ಪಡೆ, 2006ರಲ್ಲಿ ನಿವೃತ್ತಿ. ಪ್ರಕಟಿತ ಕೃತಿಗಳು: ಕೋವಿ ಮತ್ತು ಗುಬ್ಬಚ್ಚಿ ಗೂಡು, ಕವನ ಬರುವುದಾದರೆ ಬರಲಿ (ಕವನ ಸಂಕಲನಗಳು), ಯುಗಾದಿ ಒಂದು ಚಿಂತನೆ ಮತ್ತು ಇತರ ಲೇಖನಗಳು, ಇನ್ನೂ ಕೆಲ ಕೃತಿಗಳು ಅಚ್ಚಿನಲ್ಲಿವೆ. ರಿಪ್ಪನ್ ಪೇಟೆಯ ಕಲಾ ಕೌಸ್ತುಭ ಕನ್ನಡ ಸಂಘ, ...
READ MORE