ದೀವಟಿಗೆ

Author : ಬಸವಣ್ಣ ಎಂ. ಎಸ್

Pages 66

₹ 70.00




Year of Publication: 2018
Published by: ಯುಕ್ತ ಪ್ರಕಾಶನ
Address: ನಂ. 2109, ಮದ್ವಾಚಾರ್ ರಸ್ತೆ ಕೆ ಆರ್ ಮೊಹಲ್ಲ, ಮೈಸೂರು- 570004
Phone: 9880939952

Synopsys

ದೀವಟಿಗೆ-ಕವಿ ಬಸವಣ್ಣ ಎಂ.ಎಸ್. ಅವರ ಕವನ ಸಂಕಲನ. ಕತ್ತಲ ದಾರಿಯಲ್ಲಿ ನಡೆಯುವಾಗ  ಬೆಳಕು ಬೇಕು ಈ ಬೆಳಕಿನ ಸಂಕೇತವೇ ದೀವಟಿಗೆ. ಆಧುನಿಕ ಬೆಳಕಿನ ದೀಪ ಬರುವುದಕ್ಕೂ ಮುನ್ನ ಈ ನೆಲದ ಜನರು ಬೇರೆ ಬೇರೆ ರೂಪದ ದೀಪಗಳನ್ನು ಕಂಡುಕೊಂಡಿದ್ದರು ಹಾಗೂ ತಮ್ಮ ಸುತ್ತಲಿನ ಕತ್ತಲನ್ನು ದೂರವಾಗಿಸಲು ಬೆಳಕಿಗೆ ಪಂಜನ್ನು ಬಳಸಿಕೊಳ್ಳುತ್ತಿದ್ದರು ಅಂತಹ ಪಂಜಿನ ಪ್ರತಿಮಾತ್ಮಕ ರೂಪವನ್ನೆ ಬಸವಣ್ಣ ಎಸ್ ಮೂಕಹಳ್ಳಿ ಅವರು ತಮ್ಮ ಕವನ ಸಂಕಲನದ ಶೀರ್ಷಿಕೆಯಾಗಿ ದೀವಟಿಗೆಯನ್ನು ಬಳಸಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಬಹುಮಾನಕ್ಕೆ ಈ ಕೃತಿ ಆಯ್ಕೆಯಾಗಿದೆ. ‘ ನಾನು ಬರೆಯುತ್ತೇನೆ ನನಗಾಗಿ ಅಲ್ಲ ನನ್ನವರ ನೋವಿನ ಆಳವನ್ನು ಅರಿಯುವುದಕ್ಕಾಗಿ ನಾನು ಬರೆಯುತ್ತೇನೆ ಬಹುಮಾನಕ್ಕಾಗಿ ಅಲ್ಲ ಬದುಕೇ ತೀರುತ್ತೇನೆಂಬ ಅಭಿಮಾನಕ್ಕಾಗಿ ನಾನು ಬರೆಯುತ್ತೇನೆ ಬದುಕನ್ನು ಬಂಗಾರ ಮಾಡುವುದಕ್ಕಲ್ಲ ಬದುಕನ್ನು ಬದುಕಂತೆಯೇ ಬದುಕುವುದಕ್ಕಾಗಿ’ ಎಂದು ನೀವೆದಿಸಿಕೊಳ್ಳುವ ಕವಿ ಬಸವಣ್ಣ ಎಸ್ ಮೂಕಹಳ್ಳಿ,  ತನ್ನೊಳಗಿನ ಲೋಕವನ್ನು, ಲೋಕದೊಳಗಿನ ತನ್ನನ್ನೂ ಅನುಸಂಧಾನ ಮಾಡಿಕೊಳ್ಳುತ್ತಲೇ, ನೊಂದವರ, ಬಡವರ, ದಮನಿತರ, ಅಸ್ಪೃಶ್ಯರ, ರೈತರ, ಸ್ತ್ರೀಯರ, ಅಬಲೆಯರ, ನೋವನ್ನು ತಮ್ಮ ನೋವೇ ಎಂಬಂತೆ ತಲ್ಲಣಗೊಂಡು, ಅದನ್ನೇ ಕಾವ್ಯವಸ್ತುವಾಗಿಸಿದ್ದಾರೆ. 

About the Author

ಬಸವಣ್ಣ ಎಂ. ಎಸ್
(01 June 1987)

ಲೇಖಕ ಬಸವಣ್ಣ ಎಸ್ ಮೂಕಹಳ್ಳಿ ಅವರು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕೆ.‌ಮೂಕಹಳ್ಳಿ ಗ್ರಾಮದವರು. ತಂದೆ ಸುಬ್ಬಯ್ಯ, ತಾಯಿ ಶಿವಮ್ಮ. ತಮ್ಮ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಶಿಕ್ಷಣವನ್ನು ಕೆ.‌ಮೂಕಹಳ್ಳಿ, ಮಂಗಲ, ಕುದೇರು, ಚಾಮರಾಜನಗರದಲ್ಲಿ ಪೂರೈಸಿಕೊಂಡರು.  ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ಬಿಇಡಿ ಪದವೀಧರರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವೀಧರರು. 2014-16 ರ ಅವದಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ದೆಹಲಿಯ  ಐ.ಸಿ.ಎಸ್.ಎಸ್.ಆರ್.‌ ಸಂಯೋಜಿತ  'ತಳ ಸಮುದಾಯಗಳ ಪದಕೋಶ' ಯೋಜನೆಯಡಿ ಸಹ ಸಂಶೋಧಕರಾಗಿದ್ದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಚಾಮರಾಜನಗರದ  ಡಾ. ಬಿ ಆರ್ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಸುವರ್ಣ ಗಂಗೋತ್ರಿಯಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.  ಕೃತಿಗಳು: ...

READ MORE

Related Books