ಸ್ವಾಭಿಮಾನದ ಬೀಡಿಗೆ

Author : ವಿ. ಮುನಿವೆಂಕಟಪ್ಪ

Pages 80

₹ 15.00




Year of Publication: 1996
Published by: ವಿಚಾರವಾದಿ ಪ್ರಕಾಶನ
Address: # 382, 4ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570009

Synopsys

ಕವಿ ವಿ. ಮುನಿವೆಂಕಟಪ್ಪ ಅವರ ಎರಡನೇ ಕವನ ಸಂಕಲನ-ಸ್ವಾಭಿಮಾನದ ಬೀಡಿಗೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಎಚ್.ಎಸ್.ಕೆ. ‘ಅಸಹಾಯಕತೆ, ನಿರಾಶೆ, ಪ್ರತಿಭಟನೆ ಇತ್ಯಾದಿ ಕಾವ್ಯಭಾವಗಳಿವೆ. ಇವುಗಳ ಭಗ್ನಾವಶೇಷದ ಮೇಲೆ ಹೊಸ ಜಗತ್ತೊಂದು ನಿರ್ಮಿಸುವ ಉತ್ಸಾಹದ ಸೆಳೆತ ಇದೆ. ಕಾವ್ಯ ಗುಣ ಹೆಚ್ಚು ನಿಚ್ಚಳವಾಗಿ ಮೈದಳೆದಿದೆ. ಸಹಜವಾದ ಆಡುಮಾತಿನ ಬಂಧವೂ ಇದೆ. ಹೃದ್ಯವಾದ ಲಯವೂ ಇದೆ’ ಎಂದು ಪ್ರಶಂಸಿಸಿದ್ದಾರೆ. ಈ ಸಂಕಲನವು 1988 ರಲ್ಲಿ ಮೊದಲ ಮುದ್ರಣ ಕಂಡಿತ್ತು.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books