ಗರಿ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 124

₹ 90.00




Year of Publication: 2014
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ವರಕವಿ ದ.ರಾ. ಬೇಂದ್ರೆಯವರ ಮೊದಲ ಕವನಸಂಕಲನ ಗರಿ. ಈ ಸಂಕಲನದಲ್ಲಿ ಬೇಂದ್ರೆಯವರ ಜನಪ್ರಿಯ 56 ಕವಿತೆಗಳಿವೆ. ’ಅಂಬಿಕಾತನಯದತ್ತ’ ಕಾವ್ಯನಾಮದಿಂದ ಕವಿತೆಗಳನ್ನು ಬರೆಯುತ್ತಿದ್ದ ಬೇಂದ್ರೆಯವರು 1918ರಿಂದ 1932ರ ನಡುವಿನ ಅವಧಿಯಲ್ಲಿ ಬರೆದ ಕವಿತೆಗಳಿವು. 2-3 ಕವಿತೆಗಳನ್ನು ಬಿಟ್ಟರೆ ಉಳಿದೆಲ್ಲವನ್ನು ಅವುಗಳ ರಚಿತವಾದ ಕಾಲಾನುಕ್ರಮದಲ್ಲಿಯೇ ಈ ಸಂಕಲನದಲ್ಲಿ ಸೇರಿಸಲಾಗಿದೆಯೆಂದು ಬೇಂದ್ರೆ ತಿಳಿಸಿದ್ದಾರೆ. ಈ ಸಂಕಲನದಲ್ಲಿ ಪ್ರಕಟವಾಗುವ ಮುನ್ನ ವಿವಿಧ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ’ಸಹೃದಯರು ಸ್ವಭಾವಾಧೀನರಲ್ಲ ಅವರ ಮಾತು ಹೊಗಳಿಕೆ, ತೆಗಳಿಕೆಯದಲ್ಲ. ಅವರ ಅಮೃತ ದೃಷ್ಟಿಯು ಕವನಗಳ ಒರೆಗಲ್ಲು. ಅದಕ್ಕೆ ಗುರಿಯಾಗುವುದೊಂದು ಅನುಗ್ರಹ. ಅದಕ್ಕೆ ಮರೆಯಾಗುವುದೊಂದು ಶಾಪ. ಅಂತಹ ಸಹೃದಯದ ಶಾಪಾನುಗ್ರಹದ ಗಾಳಿಯಲ್ಲಿ ಈ ಗರಿಗಳನ್ನು ತೂರಿದ್ದೇನೆ’ ಎಂದು ಬೇಂದ್ರೆಯವರು ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಹಕ್ಕಿ ಹಾರುತಿದೆ ನೋಡಿದಿರಾ, ಬೆಳಗು, ರಾಗರತಿ, ಕುಣಿಯೋಣು ಬಾರಾ,ಯುಗಾದಿ ಎಂಬ ಸೊಗಸಾದ ಭಾವಗೀತೆಗಳಿವೆ. ಹಾಗೆಯೇ ಅಹಹ ಸ್ವತಂತ್ರದೇವಿ, ಹಂಪಿ ವಿಜಯನಗರ ದರ್ಶನ, ಕನಸಿನೊಳಗೊಂದು ಕಣಸು ತರಹದ ದೇಶಭಕ್ತಿಯನ್ನು ಸಾರುವ ಕವಿತೆಗಳ ಜೊತೆಯಲ್ಲಿ ಬೇಂದ್ರೆಯವರನ್ನು ಸೆರೆವಾಸಕ್ಕೆ ಈಡು ಮಾಡಿದ ನರಬಲಿ ಕವಿತೆಯು ಇದೇ ಸಂಕಲನದಲ್ಲಿದೆ. ಕರಿಮರಿ ನಾಯಿ, ಗಿಳಿಯು ಪಂಜರದೊಳಿಲ್ಲ, ಬೆಕ್ಕು ಹಾರುತಿದೆ ನೋಡಿದಿರಾ ಎಂಬ ವಿಡಂಬನಾತ್ಮಕ ಕವಿತೆಗಳು ಸಂಕಲನದ ವೈವಿಧ್ಯವನ್ನು ಹೆಚ್ಚಿಸಿವೆ. ’ಆಹಾರವು ಪಚನವಾಗಬೇಕಾದರೆ ಅನ್ನದ ಪಾಕದಷ್ಟೇ ತಿನ್ನುವವರು ನುರಿಸಬೇಕಾದುದು ಅಗತ್ಯ ಎಂಬ ಮಾತು ಸಾಹಿತ್ಯದಲ್ಲಿಯೂ ಸತ್ಯವಾಗಿದೆ. ಸುಲಿದ ಬಾಳೆಹಣ್ಣನ್ನು ನುರಿಸದೇ ನುಂಗಿದರೆ ರಸಪಾಕ ಹೊಂದುವುದಿಲ್ಲ’ ಎಂದು ಬೇಂದ್ರೆಯವರು ಸಹೃದಯನಿಗೆ ಕಿವಿಮಾತು ಹೇಳಿದ್ದಾರೆ. ’ಇದು ಬರಿ ಬೆಳಗಲ್ಲೊ ಅಣ್ಣಾ’ ಎನ್ನುವ ಹಾಗೆ ಇವು ಕೇವಲ ’ಕವಿತೆಗಳಲ್ಲೊ ಅಣ್ಣಾ’ ಎನ್ನಬಹುದು.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books