ಕವಿ, ನಾಟಕಕಾರ ಎಲ್.ಎನ್. ಮುಕುಂದರಾಜರ ‘ಉಪ್ಪೇರಿದ ದರ್ಪಣ' ದಲ್ಲಿಯ ಕವಿತೆಗಳು ಕಾಲ, ಭಾಷೆ, ಜಾತಿ, ಧರ್ಮ, ವಯೋಮಾನ, ಖಂಡಗಳನ್ನು ಮೀರಿ ಬೆಳೆಯುತ್ತವೆ. ವೈಯಕ್ತಿಕ ಒಡನಾಟದಿಂದ ಹಿಡಿದು, ಸಮಕಾಲೀನ ಸಮಯದ ತಲ್ಲಣಗಳ ಕುರಿತ ಕವಿತೆಗಳೂ ಇವೆ. ಈ ಕಾರಣದಿಂದಾಗಿ ಈ ಕವನ ಸಂಕಲನ ವಿಶಿಷ್ಟವಾಗಿದೆ.
ಜೀಮೂತ ವಾಹನ, ಪ್ರೊ ಕಿ.ರಂ.ನಾಗರಾಜ, ನಟ ಕರಿಬಸವಯ್ಯ, ಕಪ್ಪು ಹೋರಾಟಗಾರ ನೆಲ್ಸನ್ ಮಂಡೇಲಾವರೆಗೆ, ಅವರ ಬದುಕು, ವ್ಯಕ್ತಿತ್ವ, ಹೋರಾಟಗಳ ಒಡಲಾಳವನ್ನು ತೆರೆದಿಡುವ ಕುರಿತು ಬರೆದ ಕವಿತೆಗಳಿವೆ.
ಎಲ್. ಎನ್. ಮುಕುಂದರಾಜ್ ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...
READ MORE