‘ಚಲಿಸುವ ಮೋಡಗಳ ಮಧ್ಯದಿ’ ಕೃತಿಯು ಶ್ರೀರಾಜ್ ಎಸ್. ಆಚಾರ್ಯ(ಕಾವ್ಯ ಬೈರಾಗಿ)ಅವರ ಕವನಸಂಕಲನವಾಗಿದೆ. ‘ದ್ವೇಷದ್ವೇಷಗಳ ಯುದ್ಧಗಳನು ಬದಿಗೊತ್ತಿ ಸ್ವಾರ್ಥಸ್ವಾರ್ಥತೆಯ ಭಾವನೆಗಳ ದೂರತಳ್ಳಿ ಪ್ರೀತಿ, ಸ್ನೇಹಗಳ ಬೆಳಕು ಹರಡುವ ದೀಪವಾಗಬೇಕು… ಎಂಬ ಉನ್ನತ ಆದರ್ಶದ ಬೆನ್ನು ಹತ್ತಿರುವ ಈ ಕವಿ ಕೇವಲ ಒಳ್ಳೆಯದನ್ನೇ ಬಯಸುವ ಆಶಾವಾದಿಯೂ ಆಗಿದ್ದಾರೆ. ಬೇರೆ ಬೇರೆ ಸಂದರ್ಭದಲ್ಲಿ ತನಗೆ ತೋಚಿದ ವಿಚಾರಗಳನ್ನು ಮಥಿಸಿ ಬಂದ ಸುಮಾರು ಎಪ್ಪತ್ತು ಕವಿತೆಗಳ ಈ ಗುಚ್ಛ ಓದುಗರಿಗೆ ಮತ್ತಷ್ಟು ಹತ್ತಿರವಾಗುತ್ತದೆ.
1924 ರಲ್ಲಿ ಜನಿಸಿದ ಕೃಷ್ಣ ಶ್ರೀಪಾದ ದೇಶಪಾಂಡೆ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಎಂ.ಎ. ಪದವಿಯನ್ನೂ, ಗ್ರಂಥಪಾಲನದಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದರು. ಅಮೆರಿಕನ್ ಲೈಬ್ರರಿ ಅಸೋಸಿಯೇಷನ್‌ನಿಂದಲೂ ಗೌರವ ಡಿಪ್ಲೋಮಾ ಪಡೆದಿದ್ದಾರೆ. ತಮ್ಮ ಮೂವತ್ತೈದನೇ ವಯಸ್ಸಿಗೇ ಮಧ್ಯೆ ಅಮೇರಿಕಾ, ಬ್ರಿಟನ್, ಫ್ರಾನ್ಸ್, ಸ್ವಿಟ್ಟರ್ಲೆಂಡ್ ಹಾಗೂ ಇಟಲಿ ದೇಶಗಳಿಗೆ ಪ್ರವಾಸ ಮಾಡಿ ಅಲ್ಲಿನ ಪ್ರಮುಖ ಗ್ರಂಥಾಲಯಗಳನ್ನು ಸಂದರ್ಶಿಸಿದ್ದಾರೆ. 1951 ರಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದರು. ಈ ಮಧ್ಯೆ ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳ ಗ್ರಂಥಪಾಲರೂ, ಗ್ರಂಥಾಲಯ ವಿಜ್ಞಾನ ವಿಭಾಗದ ಗೌರವ ಪ್ರಾಧ್ಯಾಪಕರೂ ಆಗಿ ಕೆಲಸ ...
READ MORE